ಯುಪಿಎಗೆ ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳು ಬೇಷರತ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಯು ರಾಜ್ಯಸಭೆಯಲ್ಲಿ ಆರಾಮದಾಯಕ ಸ್ಥಾನ ಕಂಡುಕೊಂಡಿದೆ.
ರಾಜ್ಯಸಭೆಯಲ್ಲಿ ಸರಳ ಬಹುಮತಕ್ಕಾಗಿ 116 ಮತಗಳ ಅವಶ್ಯಕತೆ ಇದೆ. 245 ಸದಸ್ಯಬಲದ ರಾಜ್ಯಸಭೆಯ 12 ಸದಸ್ಯರು ಈ ಬಾರಿ ಲೋಕಸಭೆ ಆಯ್ಕೆಯಾಗಿರುವ ಕಾರಣ ಈ ಸ್ಥಾನಗಳು ಖಾಲಿಯಾಗಿವೆ.
ಕಾಂಗ್ರೆಸ್ 68 ಸದಸ್ಯರನ್ನು ಹೊಂದಿದೆ. ಡಿಎಂಕೆ ಮತ್ತು ಎನ್‌ಸಿಪಿಗಳು ತಲಾ ನಾಲ್ಕು ಸದಸ್ಯರನ್ನು ಹೊಂದಿದೆ. ತೃಣಮೂಲ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಎರಡು ಸದಸ್ಯರು ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಮುಸ್ಲಿಂಲೀಗ್ ತಲಾ ಒಂದೊಂದು ಸದಸ್ಯರನ್ನು ಹೊಂದಿವೆ. ಸಮಾಜವಾದಿ ಪಕ್ಷವು 13, ಬಿಎಸ್ಪಿ 10, ಆರ್‌ಜೆಡಿ 4 ಹಾಗೂ ಎಲ್‌ಜೆಪಿ ಒಂದು ಸದಸ್ಯರನ್ನು ರಾಜ್ಯಸಭೆಯಲ್ಲಿ ಹೊಂದಿವೆ.
ಇದಲ್ಲದೆ ಒಂದೊಂದು ಸದಸ್ಯರನ್ನು ಹೊಂದಿರುವ ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್, ಬೋಡೋ ಪೀಪಲ್ಸ್ ಫ್ರಂಟ್ ಹಾಗೂ ಮಿಜೋ ನ್ಯಾಶನಲ್ ಫ್ರಂಟ್ ಸಹ ಯುಪಿಎಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಇದೇವೇಳೆ ಏಳು ಸ್ವತಂತ್ರ ಅಭ್ಯರ್ಥಿಗಳು ಹಾಗೂ 9 ನಾಮನಿರ್ದೇಶಿತ ಸದಸ್ಯರ ಸಹಾಯದಿಂದ ಬಹುಮತ ಸಾಬೀತಿಗೆ ಯಾವುದೇ ಸಮಸ್ಯೆಯಾಗಲಾರದು.
ಈ ಮಧ್ಯೆ, ಎನ್‌ಡಿಎ 102 ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿಯು 47 ಸದಸ್ಯರನ್ನು ಹೊಂದಿದೆ. ಇವರಲ್ಲಿ ಮೂವರು ನಾಮನಿರ್ದೇಶಿತ ಸದಸ್ಯರು. ಎಡಪಕ್ಷಗಳು 22 ಸದಸ್ಯರನ್ನು ಹೊಂದಿದ್ದರೆ, ಎಐಎಡಿಎಂಕೆ 7, ಜೆಡಿಯು 6, ಶಿವಸೇನೆ 4, ಬಿಜೆಡಿ 4, ಅಖಾಲಿ ದಳ 3 ಸ್ಥಾನಗಳನ್ನು ಹೊಂದಿವೆ. |