ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮತಪತ್ರ ಪದ್ಥತಿ ಮರುಜಾರಿಗೆ ಬಿಜೆಪಿ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತಪತ್ರ ಪದ್ಥತಿ ಮರುಜಾರಿಗೆ ಬಿಜೆಪಿ ಒತ್ತಾಯ
ಇತ್ತೀಚೆಗೆ ಅಂತ್ಯಗೊಂಡ ಮಹಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಭಾರತೀಯ ಜನತಾ ಪಕ್ಷವು , ತಮ್ಮ ಹಿನ್ನೆಡೆಗೆ ವಿದ್ಯುನ್ಮಾನ ಮತಯಂತ್ರ ಕಾರಣ ಎಂದು ಹೇಳಿದ್ದು, ಹಿಂದಿನ ಪದ್ಧತಿಯಾದ ಮತಪತ್ರವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.

"ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ವಿದ್ಯುನ್ಮಾನ ಮತಯಂತ್ರ ಪದ್ಧತಿಯನ್ನು ಹಿಂತೆಗೆದುಕೊಂಡಿವೆ, ನಾವು ಸಹ ಇದನ್ನು ನಿಲ್ಲಿಸಬೇಕು" ಎಂದು ಒರಿಸ್ಸಾ ಬಿಜೆಪಿ ಅಧ್ಯಕ್ಷ ಸುರೇಶ್ ಪೂಜಾರಿ ಹೇಳಿದ್ದಾರೆ. ಅವರು ಮಾನಸಿಕ ಪುನಶ್ಚೇತನ ಕಾರ್ಯದ ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಮತಯಂತ್ರಗಳ ನಿಖರತೆಯ ಕುರಿತು ಗಂಭೀರ ಸಂಶಯಗಳನ್ನು ವ್ಯಕ್ತಪಡಿಸಿರುವ ಅವರು, ಮತಪತ್ರಗಳು ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹವಾಗಿರುತ್ತದೆ ಎಂದು ಅಭಿಪ್ರಾಯಿಸಿದರು. ಇದಲ್ಲದೆ, ಮತಪತ್ರಗಳನ್ನು ದಾಖಲೆಯಾಗಿ ಕಾಯ್ದಿರಿಸಬಹುದಾಗಿದೆ. ಆದರೆ ಮತಯಂತ್ರಗಳ ಮೂಲಕದ ಮತದಾನದಿಂದ ಇದು ಸಾಧ್ಯವಿಲ್ಲ ಎಂದು ಅವರು ಸಲಹೆ ಮಾಡಿದ್ದಾರೆ.

ಪೂಜಾರಿ ಅಭಿಪ್ರಾಯವನ್ನು ಅವರ ಪಕ್ಷದ ಹಿರಿಯ ನಾಯಕರು ಬೆಂಬಲಿಸಿದ್ದಾರೆ. ಇದರಲ್ಲಿ ಭುವನೇಶ್ವರ ಕೇಂದ್ರ ಕ್ಷೇತ್ರದಿಂದ ಸ್ಫರ್ಧಿಸಿ ಠೇವಣಿ ಕಳೆದುಕೊಂಡಿರುವ ಬಿ.ಬಿ. ಹರಿಚಂದನ್ ಅವರೂ ಸೇರಿದ್ದಾರೆ.

ಒರಿಸ್ಸಾದ 147 ಸ್ಥಾನಬಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಆರು ಸ್ಥಾನ ಗಳಿಸಿದೆ. 21 ಲೋಕಸಭಾ ಸ್ಥಾನಗಳಲ್ಲಿ ಒಂದು ಸ್ಥಾನವೂ ಬಿಜೆಪಿಗೆ ಧಕ್ಕಲಿಲ್ಲ.

2004ರ ಚುನಾವಣೆಯಲ್ಲಿ ಬಿಜೆಪಿಯು 32 ವಿಧಾನಸಭಾ ಸ್ಥಾನಗಳು ಮತ್ತು ಏಳು ಲೋಕಸಭಾ ಸ್ಥಾನಗಳನ್ನು ಗಳಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಮಮತಕ್ಕ'ನಿಗೆ ವಿಶೇಷ ವಿಮಾನ ಕಳುಹಿದ ಕಾಂಗ್ರೆಸ್
ರಾಜ್ಯಸಭೆಯಲ್ಲಿ ಯುಪಿಎಗೆ ಸಮಸ್ಯೆ ಇಲ್ಲ
ಸಿಂಗ್‌ರಿಗೆ ಸರ್ಕಾರ ರಚನೆಗೆ ಆಹ್ವಾನ, 22ರಂದು ಅಸ್ತಿತ್ವಕ್ಕೆ
ಲಂಕಾಗೆ ತೆರಳಿದ ಎನ್ಎಸ್ಎ, ವಿದೇಶಾಂಗ ಕಾರ್ಯದರ್ಶಿ
ತೃತೀಯರಂಗ ಸ್ಥಾಪನೆಯೊಂದು ದೊಡ್ಡ ತಪ್ಪು: ಸಿಪಿಎಂ
ಯುಪಿಎ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ