ಅನಾಥಾಶ್ರಮದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ದೇವ ಮಾನವ ಸಂತೋಷ್ ಮಾಧವನ್‌ಗೆ ಕೇರಳದ ಕೋರ್ಟ್ ಒಂದು 16 ವರ್ಷಗಳ ಕಠಿನ ಸಜೆಯನ್ನು ವಿಧಿಸಿ ತೀರ್ಪು ನೀಡಿದೆ. ಇದಲ್ಲದೆ ಅತ್ಯಾಚಾರಕ್ಕೊಳಗಾದ ಬಾಲಕಿಯರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಹಾಗೂ ಖರ್ಚು ರೂಪವಾಗಿ ರೂ. 20 ಸಾವಿರ ನೀಡುವಂತೆಯೂ ಕೋರ್ಟು ಮಾಧವನ್‌ಗೆ ಆದೇಶ ನೀಡಿದೆ. ಸ್ವಾಮಿ ಅಮೃತ ಚೈತನ್ಯ ಎಂದೇ ಪ್ರಸಿದ್ಧಿ ಹೊಂದಿದ ದೇವ ಮಾನವ ಸಂತೋಷ್ ಮಾಧವನ್‌ಗೆ ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಸಮಾಜದ ಉನ್ನತ ವ್ಯಕ್ತಿಗಳೊಂದಿಗೆ ನಂಟು ಇದೆ.
|