ದೆಹಲಿ, ಗುವಾಹತಿ ಹಾಗೂ ಅಲಹಾಬಾದ್ ವಲಯಗಳ ಸಿಬಿಎಸ್ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್)ಯ 12 ತರಗತಿಯ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿದ್ದು, ಇಲ್ಲಿಯೂ ಬಾಲಕಿಯರು ಮೇಲ್ಗೈ ಸಾಧಿಸಿದ್ದಾರೆ.ಪರಿಕ್ಷೆಯಲ್ಲಿ ಶೇ. 85.94 ಬಾಲಕಿಯರು ಪಾಸಾಗಿದ್ದರೆ, ಶೇ. 77.40 ಬಾಲಕರು ಪಾಸಾಗಿದ್ದಾರೆ ಎಂದು ಸಿಬಿಎಸ್ಇ ವಕ್ತಾರರು ಹೇಳಿದ್ದಾರೆ.ಒಟ್ಟಾರೆಯಾಗಿ ಕಳೆದ ಬಾರಿಗೆ ಹೋಲಿಸಿದರೆ ಈ ಸರ್ತಿ ಫಲಿತಾಂಶದಲ್ಲಿ ಶೇ. 0.09 ಹೆಚ್ಚಳ ಉಂಟಾಗಿದೆ. ಈ ಸರ್ತಿಯ ಫಲಿತಾಂಶ ಶೇ. 81.ಚೆನ್ನೈ ವಲಯವು ಅತಿಹೆಚ್ಚು ಶೇ.92.06 ಫಲಿತಾಂಶ ದಾಖಲಿಸಿದೆ. ದೇಶ ಹಾಗೂ ವಿದೇಶದಲ್ಲಿ 2,64,248 ಬಾಲಕಿಯರು ಸೇರಿದಂತೆ ಒಟ್ಟು 6,37,578 ವಿದ್ಯಾರ್ಥಿಗಳು ಮಂಡಳಿ ಪರೀಕ್ಷೆಗ ಹಾಜರಾಗಿದ್ದರು. |