ಖಾತೆ ಹಂಚಿಕೆ ವಿಚಾರದಲ್ಲಿ ಅತೃಪ್ತಿಗೊಂಡ ಡಿಎಂಕೆ ವರಿಷ್ಠ ಕರುಣಾನಿಧಿ ಅವರು ಡಿಎಂಕೆ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಮರಳಿದ್ದರೂ, ಶುಕ್ರವಾರ ಸಾಯಂಕಾಲ 6.30ಕ್ಕೆ ರಾಷ್ಟ್ರಪತಿ ಭವನದ ಅಶೋಕ ಸಭಾಂಗಣದಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಡಿಎಂಕೆಯ ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದು ಡಿಎಂಕೆಯ ಸಂಸದೀಯ ಪಕ್ಷದ ನಾಯಕ ಟಿ.ಆರ್. ಬಾಲು ಶುಕ್ರವಾರ ಹೇಳಿದ್ದಾರೆ.
ನವದೆಹಲಿಯಿಂದ ಚೆನ್ನೈಗೆ ಆಗಮಿಸಿರುವ ಅವರನ್ನು ಖಾತೆಹಂಚಿಕೆ ಸೂತ್ರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತನ್ನ ಗುರುವಾರದ ಹೇಳಿಕೆಗೆ ಸೇರಿಸಲು ಹೆಚ್ಚೇನೂ ಇಲ್ಲ ಎಂದಿದ್ದಾರೆ. 2004ರಲ್ಲಿ ಸಚಿವ ಖಾತೆ ಹಂಚಿಕೆಗೆ ಯಾವುದೇ ಸೂತ್ರ ಇರಲಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ‌್‌ನೊಂದಿಗಿನ ಮಾತುಕತೆ ವಿಫಲಗೊಂಡಿರುವುದಕ್ಕೆ ಚಿಂತೆಯಾಗಿದೆಯೇ ಎಂಬ ಪ್ರಶ್ನೆಗೆ "ಚಿಂತೆಯ ಪ್ರಶ್ನೆಯೇ ಇಲ್ಲ ನಾವು ಸ್ನೇಹಿತರು" ಎಂದು ಉತ್ತರಿಸಿದರು. |