ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತದಿಂದ ಶ್ರೀಲಂಕಾಗೆ ವೈದ್ಯಕೀಯ ನೆರವು ರವಾನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಿಂದ ಶ್ರೀಲಂಕಾಗೆ ವೈದ್ಯಕೀಯ ನೆರವು ರವಾನೆ
ಶ್ರೀಲಂಕಾದ ಯುದ್ಧ ಜರ್ಜರಿತ ಮಂದಿಗೆ ನೆಮ್ಮದಿ ಹಾಗೂ ಸಹಾಯ ಒದಗಿಸುವ ನಿಟ್ಟಿನಲ್ಲಿ ಭಾರತವು ಶುಕ್ರವಾರ ವೈದ್ಯಕೀಯ ತಂಡ ಒಂದನ್ನು ಶ್ರೀಲಂಕಾಗೆ ರವಾನಿಸಿದೆ. ಈ ತಂಡವು ತಮಿಳು ಬಾಹುಳ್ಯದ ಉತ್ತರ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಲಿದೆ.

ಎಲ್ಟಿಟಿಇ ಹಾಗೂ ಸೇನೆಯ ನಡುವಿನ ಯುದ್ಧದಿಂದಾಗಿ ಬಳಲಿರುವ ನಾಗರಿಕರ ಚಿಕಿತ್ಸೆಗಾಗಿ 8 ವೈದ್ಯರನ್ನೊಳಗೊಂಡಿರುವ 27 ಮಂದಿಯ ವೈದ್ಯಕೀಯ ತಂಡ ಹಾಗೂ 25 ಟ‌ನ್‌ಗಳಿಗೂ ಅಧಿಕ ಪರಿಹಾರ ಸಾಧನಗಳನ್ನು ರವಾನಿಸಿರುವುದಾಗಿ ಬ್ರಿಗೇಡಿಯರ್ ಸಚ್‌ದೇವ್ ಅವರು ತಿಳಿಸಿದ್ದಾರೆ.

ಆಂತರಿಕವಾಗಿ ಸ್ಥಳಾಂತರಗೊಂಡಿರುವ ಜನರಿಗೆ ವಾವುನಿಯಾವು ಸಮೀಪವಿರುವ ಕಾರಣ ತಮ್ಮ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರಿಸಲು ಶ್ರೀಲಂಕಾವು ವಿನಂತಿಸಿದೆ ಎಂದು ಅವರು ಹೇಳಿದ್ದಾರೆ.

ಪಾಲಂ ವಾಯು ನೆಲೆಯಿಂದ ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆ ವಿಮಾನ ಐಎಲ್ 76 ಮುಂಜಾನೆ 9.30ರ ವೇಳೆಗೆ ವಿಂಗ್ ಕಮಾಂಡರ್ ಎಚ್.ಪಿ. ಕುಮಾರ್ ಅವರ ನೇತೃತ್ವದಲ್ಲಿ ಲಂಕಾದತ್ತ ಪ್ರಯಾಣ ಬೆಳೆಸಿದೆ.

ವೈದ್ಯಕೀಯ ತಂಡದಲ್ಲಿ ಸರ್ಜನ್, ಫಿಜೀಶಿಯನ್, ಅರಿವಳಿಕೆ ತಜ್ಞರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಪಡೆ ಸೇರಿದೆ. ಇದೀಗಾಗಲೆ ಶ್ರೀಲಂಕಾದಲ್ಲಿ ಸುಮಾರು ಎರಡು ಡಜನ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ನವೆಂಬರ್ 2008ರಿಂದೀಚೆಗೆ ಭಾರತವು ಸುಮಾರು 1.7ಲಕ್ಷಕ್ಕೂ ಅಧಿಕ ಕುಟುಂಬಕ್ಕಾಗುವಷ್ಟು ಪರಿಹಾರ ಮ‌ೂಟೆಗಳನ್ನು ಯದ್ಧದಿಂದಾಗಿ ಸ್ಥಳಾಂತರಗೊಂಡಿರುವ ತಮಿಳರಿಗಾಗಿ ರವಾನಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
19 ಸಚಿವರೊಂದಿಗೆ ಪ್ರಧಾನಿ ಸಿಂಗ್ ಪ್ರತಿಜ್ಞಾವಿಧಿ
ಡಿಎಂಕೆ ಸಂಸದರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ: ಬಾಲು
ರಾಜ, ಬಾಲು ಯಾಕೆ ಪ್ರಧಾನಿಗೆ ಬೇಡ?
ಸಿಬಿಎಸ್ಇ: ಇಲ್ಲೂ ಬಾಲಕಿಯರೇ ಮುಂದು
2004ರಲ್ಲೂ ಖಾತೆಗಾಗಿ ಕ್ಯಾತೆ ತೆಗೆದಿದ್ದ ಡಿಎಂಕೆ
ವರುಣ್‌‌ಗೆ ಮೆತ್ತಿಕೊಂಡ ಮತ್ತೊಂದು ವಿವಾದ