ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಡ್ವಾಣಿ ಹೈಟೆಕ್ ಪ್ರಚಾರಕ್ಕೆ ಆರೆಸ್ಸೆಸ್ ತರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಹೈಟೆಕ್ ಪ್ರಚಾರಕ್ಕೆ ಆರೆಸ್ಸೆಸ್ ತರಾಟೆ
ಇತ್ತೀಚೆಗೆ ಅಂತ್ಯಗೊಂಡಿರುವ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಆಡ್ವಾಣಿ ಅವರು ಅಂತರ್ಜಾಲ ಮ‌ೂಲಕ ಪ್ರಚಾರ ಮಾಡಿರುವ ಕ್ರಮವನ್ನು ಆರ್ಎಸ್ಎಸ್ ಪತ್ರಿಕೆ ಆರ್ಗನೈಸರ್ ತೆಳುವಾಗಿ ಟೀಕಿಸಿದೆ.

"ಹೈ ಟೆಕ್ ತಂತ್ರಜ್ಞಾನಕ್ಕೆ ಅತಿಯಾದ ಅವಲಂಬನೆ ಮತ್ತು ತಳಮಟ್ಟದ, ಕ್ಷೇತ್ರಮಟ್ಟದ ನಿರ್ವಹಣೆಗಿಂತ ಹೆಚ್ಚಿನ ಮಹತ್ವ ನೀಡಿರುವುದು ಪಕ್ಷದ ಅಭ್ಯುದಯಕ್ಕೆ ಹಾನಿಯುಂಟು ಮಾಡಿತು" ಎಂಬುದಾಗಿ ಅದು ಅಭಿಪ್ರಾಯಿಸಿದೆ.

"ರಾಜಕಾರಣದ ಆಟವನ್ನು ಕ್ಷೇತ್ರದಲ್ಲಿ ಆಡಬೇಕೇ ಹೊರತು ಹವಾನಿಯಂತ್ರಿತ ಚಾಟ್ ಕೊಠಡಿಗಳಲ್ಲಿ ಅಲ್ಲ" ಎಂಬುದಾಗಿ ಆರ್ಎಸ್ಎಸ್‌ನ ಮುಖವಾಣಿಯಲ್ಲಿ ಆಡ್ವಾಣಿಯವರ ವೆಬ್‌ಸೈಟ್ ಹಾಗೂ ಆನ್‌ಲೈನ್ ಪ್ರಚಾರವನ್ನು ಪ್ರಸ್ತಾಪಿಸಿ ಟೀಕಿಸಲಾಗಿದೆ.

ಆದರೆ, ಈ ಸಂಪಾದಕೀಯದಲ್ಲಿ ಆಡ್ವಾಣಿಯವರ ವೆಬ್‌ಸೈಟ್ ಆರಂಭದ ಬಳಿಕ, ಮುರಳಿಮನೋಹರ ಜೋಷಿ ಸೇರಿದಂತೆ ಬಿಜೆಪಿಯ ಇತರ ನಾಯಕರು ಆರಂಭಿಸಿರುವ ವೆಬ್‌ಸೈಟ್‌ಗಳ ಪ್ರಸ್ತಾಪವಿಲ್ಲ. ಇದಲ್ಲದೆ ಪಕ್ಷದ ಮಾಧ್ಯಮಗಳ ಅಪಪ್ರಚಾರದ ಗೀಳಿನ ಕುರಿತೂ ಆರ್ಗನೈಸರ್ ಟೀಕಿಸಿದೆ.

"ಪಕ್ಷ ಹಾಗೂ ಅದರ ನೆಲೆಯ ನಡುವೆ ಯಾವುದೇ ಸಂಪರ್ಕ ಕಡಿದು ಹೋಗಿಲ್ಲ. ಬಿಜೆಪಿಯು ಆಗೀಗ ಅಪಪ್ರಚಾರದ ಬಲಿಪಶುವಾಗಿದೆ. ಇದರಿಂದಾಗಿ ಬಿಜೆಪಿಯು ಮಾಧ್ಯಮಗಳ ಈ ವರ್ತನೆಯಿಂದ ಸ್ವಯಂ ಸೋಲಿನ ಭ್ರಾಂತಿಗೊಳಗಾಗಿತ್ತು. ಹೆಚ್ಚಿನ ನಗರ ಕ್ಷೇತ್ರಗಳಲ್ಲಿ ಸೋಲನ್ನು ಕಾಣಲು ಬಹುಶಃ ಇದೂ ಒಂದು ಕಾರಣವಾಗಿರಬಹುದು" ಎಂದದು ಹೇಳಿದೆ.

ಇದಲ್ಲದೆ ಪಕ್ಷವು ರಾಷ್ಟ್ರೀಯ ಮನೋಭಾವವನ್ನು ಅರಿತುಕೊಳ್ಳುವಲ್ಲಿ ವಿಫಲವಾಗದೆ, ರಾಷ್ಟ್ರದಲ್ಲಿ ಮೈತ್ರಿಯ ಯುಗದ ಅಂತ್ಯದ ಆರಂಭವಾಗಿದೆ" ಎಂದೂ ಅದು ದೂರಿದೆ. ಅಲ್ಲದೆ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಒಂದು, ಪಕ್ಷವು ದುರ್ಬಲವಾಗಿರುವಂತಹ ರಾಜ್ಯಗಳಲ್ಲಿ ತನ್ನ ಸಾಂಸ್ಥಿಕ ರಚನೆಯ ನಿರ್ಮಾಣದತ್ತ ಗಮನ ಹರಿಸಬೇಕು ಎಂಬ ಸಲಹೆ ನೀಡಿದೆ.

ಈ ಮಧ್ಯೆ ಬಿಜೆಪಿಯು ತನ್ನ ಮುಂದಿನ ಕಾರ್ಯಕಾರಿಣಿಯನ್ನು ಜೂನ್ 20 ಮತ್ತು 21ರಂದು ನಡೆಸಲಿದ್ದು, ಚುನಾವಣಾ ಸೋಲು ಹಾಗೂ ಭವಿಷ್ಯದ ರೂಪುರೇಷೆಗಳ ಕುರಿತು ಚರ್ಚಿಸಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಪ್ಪಹಣ ಪತ್ರದ ಮಾಹಿತಿ ನೀಡದಿರಲು ಕಾರಣವೇನು: ಆಡ್ವಾಣಿಗೆ ಸಿಐಸಿ
ಜಲಂಧರ್‌ನಲ್ಲಿ ಕರ್ಫ್ಯೂ ಸಡಿಲಿಕೆ, ಸರ್ವಪಕ್ಷಗಳ ಸಭೆ
ಪತ್ನಿಯನ್ನು ಸಂಕೋಲೆಯಲ್ಲಿ ಬಂಧಿಸಿಟ್ಟಿದ್ದ ಪತಿ
ಕೋಲ್ಕತಾದಲ್ಲಿ ಅಧಿಕಾರ ವಹಿಸಲಿರುವ ಮಮತಾ
ಚಂಡಮಾರುತಕ್ಕೆ ಬಲಿಯಾದವರಿಗೆ 2 ಲಕ್ಷ ಪರಿಹಾರ
ಉ.ಕೊರಿಯಾ ಅಣುಪರೀಕ್ಷೆ ಆತಂಕಕಾರಿ: ಆಂಟನಿ