ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಹಜತೆಯತ್ತ ಮರಳುತ್ತಿರುವ ಪಂಜಾಜ್, ಕರ್ಫ್ಯೂ ಸಡಿಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಹಜತೆಯತ್ತ ಮರಳುತ್ತಿರುವ ಪಂಜಾಜ್, ಕರ್ಫ್ಯೂ ಸಡಿಲಿಕೆ
ಗಲಭೆ ಜರ್ಜರಿತ ಪಂಜಾಬಿನಲ್ಲಿ ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದ್ದು, ಅಧಿಕಾರಿಗಳು ಬುಧವಾರ ಹಿಂಸಾಚಾರದ ಪ್ರತಿಭಟನೆ ಕಂಡ ಜಲಂಧರ್, ಪಗ್ವಾರ ಮತ್ತು ಹೋಶಿಯಾರ್‌ಪುರಗಳಲ್ಲಿ ಕರ್ಫ್ಯೂ ಸಡಿಲಿಸಿದ್ದಾರೆ. ಜಲಂಧರ್‌ನಲ್ಲಿ ಮೂರುಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ.

ಮುಂಜಾನೆ ಏಳರಿಂದ ಹತ್ತು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದ್ದು, ಜನತೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಎಂದು ಜಲಂಧರ್ ಜಿಲ್ಲಾಧಿಕಾರಿ ಎ.ಎಸ್. ಪನ್ನು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚಿಕ್ಕಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಜಲಂಧರ್ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ. ಆದರೆ ಮುಂಜಾಗರುಕತಾ ಕ್ರಮವಾಗಿ ಕರ್ಫ್ಯೂ ಇನ್ನೂ ಕೆಲವು ಸಮಯ ಮುಂದುವರಿಯಲಿದೆ, ಅಲ್ಲದೆ, ಮುಂದಿನ ಆದೇಶದ ತನಕ ವಾಣಿಜ್ಯ ಹಾಗೂ ಶೈಕ್ಷಣಿಕ ಸಂಸ್ಥೆಗಳು ತೆರೆಯುವುದಿಲ್ಲ ಎಂದು ಅವರು ತಿಳಿಸಿದರು.

ರಸ್ತೆ ಮತ್ತು ರೈಲು ಸಂಚಾರವು ಸಂಪೂರ್ಣವಾಗಿ ಹಿಂದಿನ ಸ್ಥಿತಿಗೆ ಮರಳಲು ಒಂದಷ್ಟು ಸಮಯ ಬೇಕಾಗಿದೆ. ಪಂಜಾಬ್ ಪೊಲೀಸರು ಮತ್ತು ಅರೆ ಸೇನಾ ಪಡೆಗಳ ನಿಯೋಜನೆಯು ಸೂಕ್ಷ್ಮ ಪ್ರದೇಶದಲ್ಲಿ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ ಧರ್ಮದ ಡೇರಾ ಸಚ್‌ಕಾಂಡ್ ಬಲ್ಲನ್ ಪಂಥದ ಗುರು ಒಬ್ಬರನ್ನು ವಿಯೆನ್ನಾದ ಗುರುದ್ವಾರದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿರುವ ಹಿನ್ನೆಲೆಯಲ್ಲಿ ಈ ಪಂಥದ ಅನುಯಾಯಿಗಳು ಭಾನುವಾರ ರಾತ್ರಿಯಿಂದ ಪಂಜಾಬ್, ಹರ್ಯಾಣಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಸಿದ್ದು, ಹಲವಾರು ರೈಲುಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು, ಹಿಂಸಾಚಾರದಲ್ಲಿ ಒಟ್ಟು ಮೂರು ಮಂದಿ ಹತರಾಗಿದ್ದು, ಇತರ ಕೆಲವರು ಗಾಯಗೊಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಲಾ ಬಲಿಸಂಖ್ಯೆ 81ಕ್ಕೇರಿಕೆ, ಡಾರ್ಜಿಲಿಂಗ್‌ನಲ್ಲಿ ಭೂಕುಸಿತ
ಭಾರೀ ಹಿಮಪಾತ: ಅಮರನಾಥ ಯಾತ್ರೆ ಮುಂದಕ್ಕೆ
ಬಿನಾಯಕ್ ಸೇನ್ ಕೊನೆಗೂ 'ಬಂಧಮುಕ್ತ'
2011ರೊಳಗಾಗಿ ಎಲ್ಲ ನಾಗರಿಕರಿಗೆ ಗುರುತಿನ ಚೀಟಿ
ಸಂಪುಟ ವಿಸ್ತರಣೆ ಗುರುವಾರಕ್ಕೆ ಮುಂದೂಡಿಕೆ
ಆಡ್ವಾಣಿ ಹೈಟೆಕ್ ಪ್ರಚಾರಕ್ಕೆ ಆರೆಸ್ಸೆಸ್ ತರಾಟೆ