ಮಾಜಿಮುಖ್ಯಮಂತ್ರಿಗಳಾದ ವಿಲಾಸ್‌ರಾವ್ ದೇಶ್‌ಮುಖ್(ಮಹಾರಾಷ್ಟ್ರ), ವೀರಭದ್ರ ಸಿಂಗ್ (ಹಿಮಾಚಲಪ್ರದೇಶ) ಹಾಗೂ ಫಾರೂಕ್ ಅಬ್ದುಲ್ಲಾ (ಜಮ್ಮು ಕಾಶ್ಮೀರ)ಸೇರಿದಂತೆ ಒಟ್ಟು 59 ಮಂದಿ ಪ್ರಥಮ ಸಂಪುಟ ವಿಸ್ತರಣೆ ವೇಳೆ ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸದಾಗಿ ಸೇರುವವರಲ್ಲಿ 14ಮಂದಿ ಸಂಪುಟ ದರ್ಜೆ, 38 ಮಂದಿ ರಾಜ್ಯಖಾತೆ ಹಾಗೂ ಇತರ ಏಳು ಮಂದಿ ಸ್ವತಂತ್ರ ಅಧಿಕಾರದ ರಾಜ್ಯಖಾತೆಯನ್ನು ಹೊಂದಲಿದ್ದಾರೆ.
ಸಂಪುಟದರ್ಜೆ ಸಂಪುಟದರ್ಜೆ ಸಚಿವರಾಗುವವರೆಂದರೆ, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಎಂ.ಎಸ್. ಗಿಲ್, ಕುಮಾರಿ ಸೆಲ್ಜಾ, ಸುಭೋದ್ ಕಾಂತ್ ಸಹಾಯ್, ಜಿ.ಕೆ. ವಾಸನ್, ಪವನ್ ಕುಮಾರ್ ಬನ್ಸಾಲ್, ಕಾಂತಿಲಾಲ್ ಭುರಿಯ, ಮುಕುಲ್ ವಾಸ್ನಿಕ್, ಡಿಎಂಕೆಯ ಅಳಗಿರಿ, ದಯಾನಿಧಿ ಮಾರನ್ ಹಾಗೂ ಎ. ರಾಜಾ ಅವರುಗಳು.
ಸ್ವತಂತ್ರ ಖಾತೆ ಸ್ವತಂತ್ರ ಅಧಿಕಾರದ ರಾಜ್ಯಖಾತೆಯನ್ನು ಗಳಿಸಲಿರುವ ಸಂಸದರೆಂದರೆ, ಪ್ರಫುಲ್ ಪಟೇಲ್(ಎನ್‌ಸಿಪಿ), ಪೃಥ್ವಿರಾಜ್ ಚೌವಾಣ್, ಶ್ರೀಪ್ರಕಾಶ್ ಜೈಸ್ವಾಲ್, ಸಲ್ಮಾನ್ ಖುರ್ಶೀದ್, ದಿನ್ಶಾ ಪಟೇಲ್, ಜೈರಾಮ್ ರಮೇಶ್, ಕೃಷ್ಣ ತೀರ್ತ್(ಎಲ್ಲಾ ಕಾಂಗ್ರೆಸ್ ಸಂಸದರು)
ರಾಜ್ಯಖಾತೆಯ ಸಚಿವರು ಇ. ಅಹಮದ್, ವಿ. ನಾರಾಯಣ ಸ್ವಾಮಿ, ಶ್ರೀಕಾಂತ್ ಜೇನಾ, ಮುಲ್ಲಪ್ಪಲ್ಲಿ ರಾಮಚಂದ್ರನ್, ಡಿ. ಪುರಂದೇಶ್ವರಿ, ಪನಬಾಕ ಲಕ್ಷ್ಮಿ, ಅಜಯ್ ಮಕೇನ್, ಕೆ.ಎಚ್. ಮುನಿಯಪ್ಪ, ನಮೋ ನಾರಾಯಣ್, ಮೀನಾ, ಜ್ಯೋತಿರಾಧಿತ್ಯ ಸಿಂಧ್ಯಾ, ಜಿತಿನ್ ಪ್ರಸಾದ್, ಎ. ಸಾಯ್ ಪ್ರತಾಪ್, ಗುರುದಾಸ್ ಕಾಮತ್, ಎಂ.ಎಂ. ಪಲ್ಲಂ ರಾಜು, ಮಹದೇವ್ ಖಂಡೇಲಾ, ಹರೀಶ್ ರಾವತ್, ಕೆ.ವಿ. ಥೋಮಸ್, ಸೌಗಾತ ರೇ, ದಿನೇಶ್ ತ್ರಿವೇದಿ, ಶಿಸಿರ್ ಅಧಿಕಾರಿ, ಸುಲ್ತಾನ್ ಅಹಮದ್, ಮುಕುಲ್ ರಾಯ್, ಮೋಹನ್ ಜತವ, ಎಸ್.ಎಸ್. ಪಳನಿಮಾಣಿಕಂ, ಡಿ. ನೇಪೋಲಿಯನ್, ಎಸ್. ಜಗತ್ರಕ್ಷಕನ್, ಎಸ್. ಗಾಂಧಿಸೆಲ್ವನ್, ಪ್ರಣೀತ್ ಕೌರ್, ಸಚಿನ್ ಪೈಲಟ್, ಶಶಿ ಥರೂರ್, ಭರತ್ ಸಿನ್ಹಾ ಸೋಲಂಕಿ, ತುಶಾರ್ ಭಾಯ್ ಚೌಧರಿ, ಅರುಣ್ ಯಾದವ್, ಪ್ರತೀಕ್ ಪ್ರಕಾಶ್‌ಬಾಪು ಪಾಟಿಲ್, ಆರ್.ಪಿ.ಎನ್. ಸಿಂಗ್, ವಿನ್ಸೆಂಟ್ ಪಾಲಾ, ಪ್ರದೀಪ್ ಜೈನ್ ಮತ್ತು ಅಗಾತ ಸಂಗ್ಮಾ.
ಇದರಿಂದಾಗಿ ಮನಮೋಹನ್ ಸಿಂಗ್ ಅವರ ಬೆಟಾಲಿಯನ್ ಸಂಖ್ಯೆ ಅವರೂ ಸೇರಿದಂತೆ 79ಕ್ಕೇರಿದೆ. ಮೇ. 22ರಂದು ಪ್ರಧಾನಿ ಅವರೊಂದಿಗೆ 19 ಮಂದಿ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.
ಗುರುವಾರ ಪ್ರಮಾಣ ವಚನ ಸ್ವೀಕರಿಸುವವರಲ್ಲಿ 42 ಮಂದಿ ಕಾಂಗ್ರೆಸ್ ಸಂಸದರು. ಇದರಿಂದಾಗಿ ಪ್ರಧಾನಿ ಸಿಂಗ್ ಸೇರಿದಂತೆ ಕಾಂಗ್ರೆಸ್ ಸಚಿವರ ಸಂಖ್ಯೆ 60ಕ್ಕೇರಿದೆ. ಡಿಎಂಕೆಯ ಏಳು, ತೃಣಮೂಲ ಕಾಂಗ್ರೆಸ್‌ನ ಆರು, ಎನ್‌ಸಿಪಿ, ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಮುಸ್ಲಿಂ ಲೀಗಿನಿಂದ ತಲಾ ಇಬ್ಬರು ಗುರುವಾರ ಸಚಿವರಾಗುತ್ತಿದ್ದಾರೆ.
ಅಚ್ಚರಿ ಎಂಬಂತೆ ಸಂಪುಟದಲ್ಲಿ ಉತ್ತರಪ್ರದೇಶಕ್ಕೆ ಪ್ರಾತನಿಧ್ಯವಿಲ್ಲ. ಇಲ್ಲಿ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ಇದೀಗಾಗಲೇ ಖಾತೆ ಪಡೆದವರು ಪ್ರಣಬ್ ಮುಖರ್ಜಿ (ಹಣಕಾಸು) ಶರದ್ ಪವಾರ್ (ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಸಾರ್ವಜನಿಕ ವಿತರಣೆ) ಎ.ಕೆ. ಆಂಟನಿ (ರಕ್ಷಣೆ), ಪಿ. ಚಿದಂಬರಂ (ಗೃಹ), ಮಮತಾ ಬ್ಯಾನರ್ಜಿ(ರೈಲ್ವೇ), ಎಸ್.ಎಂ. ಕೃಷ್ಣ(ವಿದೇಶಾಂಗ ವ್ಯವಹಾರ)
ಸಚಿವರಾಗಿದ್ದು, ಖಾತೆ ಪಡೆಯಬೇಕಾದವರು ಗುಲಾಂ ನಬಿ ಅಜಾದ್, ಸುಶಿಲ್ ಕುಮಾರ್ ಶಿಂಧೆ, ಎಂ. ವೀರಪ್ಪ ಮೊಯ್ಲಿ, ಎಸ್. ಜೈಪಾಲ್ ರೆಡ್ಡಿ, ಕಮಲ್ ನಾಥ್, ವಯಲಾರ್ ರವಿ, ಮೀರಾ ಕುಮಾರ್, ಮುರಳಿ ದಿಯೋರಾ, ಕಪಿಲ್ ಸಿಬಾಲ್, ಅಂಬಿಕಾ ಸೋನಿ, ಬಿ.ಕೆ. ಹಂದಿಕ್, ಆನಂದ್ ಶರ್ಮಾ ಹಾಗೂ ಸಿ.ಪಿ. ಜೋಷಿ. |