ದ್ವಿತೀಯ ಅವಧಿಗೆ ಅಧಿಕಾರಕ್ಕೇರಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸಂಪುಟದ ಪ್ರಥಮ ವಿಸ್ತರಣೆಯನ್ನು ಗುರವಾರ ನಡೆಸಿದ್ದು, 59 ಮಂದಿ ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡರು.
ರಾಷ್ಟ್ರಪತಿ ಭವನದ ಅಶೋಕ ಸಭಾಭವನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಭವ್ಯಸಮಾಂಭದಲ್ಲಿ, ಖಾತೆ ದೊರಕಿದ ಸಂತೃಪ್ತರು ಮುಖವರಳಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಅಧಿಕಾರ ಹಾಗೂ ಗೋಪ್ಯತೆಯ ಪ್ರತಿಜ್ಞೆ ಬೋಧಿಸಿದರು.
ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಜೈರಾಮ್ ರಮೇಶ್ ಸೇದಂತೆ ಒಟ್ಟು 59 ಮಂದಿ ಪ್ರಮಾಣವಚನ ಸ್ವೀಕರಿಸಿದ್ದು, ಪ್ರಧಾನಿ ಸಿಂಗ್ ಅವರ ಮಂತ್ರಿ ಮಂಡಲದ ಬಲ ಅವರೂ ಸೇರಿದಂತೆ 79ಕ್ಕೇರಿದೆ. ಸಂಖ್ಯಾಬಲದ ಆಧಾರದಲ್ಲಿ ಒಟ್ಟು 81 ಸಚಿವರನ್ನು ಹೊಂದಬಹುದಾಗಿದ್ದು, ಇನ್ನೂ ಎರಡು ಸ್ಥಾನಗಳು ಖಾಲಿ ಇದ್ದು, ಇದನ್ನು ತುರ್ತು ಪರಿಸ್ಥಿತಿಗಾಗಿ ಉಳಿಸಿಕೊಳ್ಳಲಾಗಿದೆ.
ಪ್ರಮಾಣ ವಚನ ಸ್ವೀಕರಿಸಿದ ಸಚಿವರ ವಿವರ ಇಂತಿದೆ. ಸಂಪುಟದರ್ಜೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ವೀರಭದ್ರ ಸಿಂಗ್, ಫಾರೂಕ್ ಅಬ್ದುಲ್ಲಾ, ವಿಲಾಸ್‌ರಾವ್ ದೇಶ್‌ಮುಖ್, ಎಂ.ಎಸ್. ಗಿಲ್, ಕುಮಾರಿ ಸೆಲ್ಜಾ, ಸುಭೋದ್ ಕಾಂತ್ ಸಹಾಯ್, ಜಿ.ಕೆ. ವಾಸನ್, ಪವನ್ ಕುಮಾರ್ ಬನ್ಸಾಲ್, ಕಾಂತಿಲಾಲ್ ಭುರಿಯ, ಮುಕುಲ್ ವಾಸ್ನಿಕ್, ಡಿಎಂಕೆಯ ಅಳಗಿರಿ, ದಯಾನಿಧಿ ಮಾರನ್ ಹಾಗೂ ಎ. ರಾಜಾ ಅವರುಗಳು.
ಸ್ವತಂತ್ರ ಖಾತೆ ಸ್ವತಂತ್ರ ಅಧಿಕಾರದ ರಾಜ್ಯಖಾತೆಯನ್ನು ಗಳಿಸಿದವರೆಂದರೆ, ಪ್ರಫುಲ್ ಪಟೇಲ್(ಎನ್‌ಸಿಪಿ), ಪೃಥ್ವಿರಾಜ್ ಚೌವಾಣ್, ಶ್ರೀಪ್ರಕಾಶ್ ಜೈಸ್ವಾಲ್, ಸಲ್ಮಾನ್ ಖುರ್ಶೀದ್, ದಿನ್ಶಾ ಪಟೇಲ್, ಜೈರಾಮ್ ರಮೇಶ್, ಕೃಷ್ಣ ತೀರ್ತ್(ಎಲ್ಲಾ ಕಾಂಗ್ರೆಸ್ ಸಂಸದರು)
ರಾಜ್ಯಖಾತೆಯ ಸಚಿವರು ಇ. ಅಹಮದ್, ವಿ. ನಾರಾಯಣ ಸ್ವಾಮಿ, ಶ್ರೀಕಾಂತ್ ಜೇನಾ, ಮುಲ್ಲಪ್ಪಲ್ಲಿ ರಾಮಚಂದ್ರನ್, ಡಿ. ಪುರಂದೇಶ್ವರಿ, ಪನಬಾಕ ಲಕ್ಷ್ಮಿ, ಅಜಯ್ ಮಕೇನ್, ಕೆ.ಎಚ್. ಮುನಿಯಪ್ಪ, ನಮೋ ನಾರಾಯಣ್, ಮೀನಾ, ಜ್ಯೋತಿರಾಧಿತ್ಯ ಸಿಂಧ್ಯಾ, ಜಿತಿನ್ ಪ್ರಸಾದ್, ಎ. ಸಾಯ್ ಪ್ರತಾಪ್, ಗುರುದಾಸ್ ಕಾಮತ್, ಎಂ.ಎಂ. ಪಲ್ಲಂ ರಾಜು, ಮಹದೇವ್ ಖಂಡೇಲಾ, ಹರೀಶ್ ರಾವತ್, ಕೆ.ವಿ. ಥೋಮಸ್, ಸೌಗಾತ ರೇ, ದಿನೇಶ್ ತ್ರಿವೇದಿ, ಶಿಸಿರ್ ಅಧಿಕಾರಿ, ಸುಲ್ತಾನ್ ಅಹಮದ್, ಮುಕುಲ್ ರಾಯ್, ಮೋಹನ್ ಜತವ, ಎಸ್.ಎಸ್. ಪಳನಿಮಾಣಿಕಂ, ಡಿ. ನೇಪೋಲಿಯನ್, ಎಸ್. ಜಗತ್ರಕ್ಷಕನ್, ಎಸ್. ಗಾಂಧಿಸೆಲ್ವನ್, ಪ್ರಣೀತ್ ಕೌರ್, ಸಚಿನ್ ಪೈಲಟ್, ಶಶಿ ಥರೂರ್, ಭರತ್ ಸಿನ್ಹಾ ಸೋಲಂಕಿ, ತುಶಾರ್ ಭಾಯ್ ಚೌಧರಿ, ಅರುಣ್ ಯಾದವ್, ಪ್ರತೀಕ್ ಪ್ರಕಾಶ್‌ಬಾಪು ಪಾಟಿಲ್, ಆರ್.ಪಿ.ಎನ್. ಸಿಂಗ್, ವಿನ್ಸೆಂಟ್ ಪಾಲಾ, ಪ್ರದೀಪ್ ಜೈನ್ ಮತ್ತು ಅಗಾತ ಸಂಗ್ಮಾ.
ಕಿರಿಯ ಸಚಿವೆ ಪ್ರಮಾಣವಚನ ಸ್ವೀಕರಿಸಿರುವವರಲ್ಲಿ ರಾಜ್ಯಖಾತೆ ವಹಿಸಿರುವ 27ರ ಹರೆಯದ ಅಗಾತ ಸಂಗ್ಮಾ ಅತ್ಯಂತ ಕಿರಿಯ ಸಚಿವೆಯಾಗಿದ್ದಾರೆ. ಈಕೆ ಮಾಜಿ ಲೋಕಸಭಾ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರಿ. ಅಗಾತಾ ಪ್ರಮಾಣ ಸ್ವೀಕರಿಸಿದ ಬಳಿಕ ಹಿರಿಯ ಮುಖಂಡರಿಗೆಲ್ಲ ನಮಿಸಿದರು.
ಪುರುಷರಲ್ಲಿ ಸಚಿನ್ ಪೈಲಟ್ ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಇವರು ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ರಾಜೇಶ್ ಪೈಲಟ್ ಅವರ ಪುತ್ರ. |