ಗುರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಒಂದಿಷ್ಟು ಲಘು ಘಟನೆಗಳು ಸಂಭವಿಸಿ ಗಂಭೀರ ಕಾರ್ಯಕ್ರಮಕ್ಕೆ ನಗೆಯ ಲೇಪನ ನೀಡಿತು.
ಇಬ್ಬರು ರಾಜ್ಯಖಾತೆ ಸಚಿವರು ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ, ರಾಷ್ಟ್ರಪತಿ ಅವರು ಪ್ರಮಾಣ ವಚನ ಬೋಧಿಸುವ ಮುನ್ನ ತಾವಾಗಿಯೇ ಓದಲು ಆರಂಭಿಸಿದರು. ಅಷ್ಟರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನಿಲ್ಲಿನಿಲ್ಲಿ (ವೇಟ್... ವೇಟ್) ಎಂದು ನಗುತ್ತಾ ತಡೆಯೊಡ್ಡಿದ್ದುರು. ತಪ್ಪಿನ ಅರಿವಾದ ಸಚಿವರು 'ಸಾರಿ ಮೇಡಮ್' ಅನ್ನುತ್ತಾ, ಮರಳಿ ರಾಷ್ಟ್ರಪತಿಗಳು ಆರಂಭಿಸಿದ ಬಳಿಕ ಪುನರುಚ್ಚರಿಸಿದರು.
ಸಚಿವರಾದ ವಿ.ನಾರಾಯಣ ಸ್ವಾಮಿ ಹಾಗೂ ಸೌಗುತಾ ರೇ ಅವರುಗಳು ಪ್ರಮಾಣ ವಚನದ ವೇಳೆ ಗಡಿಬಿಡಿಗೊಂಡರು. ಪ್ರಧಾನಿ ಮನಮೋಹನ್ ಸಿಂಗ್, ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಸಭಾಂಗಣದಲ್ಲಿ ನೆರೆದವರೆಲ್ಲ ಮುಖವರಳಿಸಿ ನಕ್ಕುಬಿಟ್ಟರು.
ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೈರಾಮ್ ಶ್ರೀರಮೇಶ್ ಅವರು ಸಹಿ ಹಾಕದೆಯೇ ತೆರಳಿದರು. ಅಷ್ಟರಲ್ಲಿ ಅಲ್ಲಿದ್ದ ಅಧಿಕಾರಿ ಅವರನ್ನು ಸರ್... ಸರ್.. ಎಂದು ಕರೆದು ಸಹಿಪಡೆದುಕೊಂಡರು. |