ಕಳೆದ ಚುನಾವಣೆಯಲ್ಲಿ ಸೋತುಸುಣ್ಣವಾಗಿರುವ ಆರ್‌ಜೆಡಿ ಪಕ್ಷಕ್ಕೆ ಪುನರ್ಜೀವ ತುಂಬಲು ಆರ್‌ಜೆಡಿ ನಾಯಕ ಲಾಲೂಪ್ರಸಾದ್ ಯಾದವ್ ಅವರು ಗ್ರಾಮಗ್ರಾಮಗಳಿಗೆ ತೆರಳಿ ಜನರನ್ನು ಭೇಟಿಯಾಗಲು ನಿರ್ಧಾರಿಸಿದ್ದಾರೆ.
"ಪಕ್ಷದ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಲು, ಪಕ್ಷದ ಪುನರುಜ್ಜೀವನಕ್ಕೆ ಕ್ರಮಕೈಗೊಳ್ಳಲು ಹಾಗೂ ಲೋಕಸಭಾ ಚುನಾವಣೆಯಿಂದಾಗಿ ಖಾಲಿಬಿದ್ದಿರುವ 15 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಸೂಚಿಸಲು, ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ನೇತೃತ್ವದಲ್ಲಿ 21 ಸದಸ್ಯತ್ವದ ಸಮಿತಿಯನ್ನು ರೂಪಿಸಲಾಗಿದೆ" ಎಂದು ಲಾಲೂಪ್ರಸಾದ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಾನು ತನ್ನ ಸಂಪೂರ್ಣ ಸಮಯವನ್ನು ನೆಲಕಚ್ಚಿರುವ ಪಕ್ಷವನ್ನು ಮೇಲೆತ್ತಲು ಬಳಸುವುದಾಗಿ ಅವರು ನುಡಿದರು. "ತಾನು ಹಲವಾರು ರಾಜಕೀಯ ಬಿರುಗಾಳಿಯನ್ನು ಕಂಡಿದ್ದೇನೆ. ಚುನಾವಣೆಯಲ್ಲಿ ಸೋತಿದ್ದರೂ, ತಾನು ಬಿಹಾರದ ಹಿತಾಸಕ್ತಿಗಾಗಿ ದುಡಿಯುವುದನ್ನು ನಿಲ್ಲಿಸುವುದಿಲ್ಲ" ಎಂದು ಲಾಲೂ ನುಡಿದರು. |