ಸರ್ಕಾರದಲ್ಲಿ ಯುವರಕರಿಗೆ ಆದ್ಯತೆ ನೀಡಿರುವ ಕುರಿತು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದರೂ, ಹೊಸ ಯುಪಿಎ ಸಂಪುಟ ಸರಾಸರಿ ವಯಸ್ಸು, ಸಂಪುಟದಲ್ಲಿ 'ಅಧಿಕ' ವಯೋವೃದ್ಧರು ಸೇರಿದ್ದಾರೆಂಬುದನ್ನು ತೋರಿಸುತ್ತದೆ ಎಂಬುದಾಗಿ ಬಿಜೆಪಿ ಟೀಕಿಸಿದೆ.
"ಕೇಂದ್ರ ಸಂಪುಟವು ಹೊಸ ಬಾಟಲಿಯಲ್ಲಿ ಹಳೆಮದ್ಯವೂ ಅಲ್ಲ. ಅದು ಪುಟ್ಟ ಬಾಟಲಿಯಲ್ಲಿ ಅಧಿಕ ಮಧ್ಯ. ಕ್ಯಾಬಿನೆಟ್‌ನ ಸರಾಸರಿ ವಯಸ್ಸು 67 ವರ್ಷಗಳು" ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಟೀಕಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ರಾಹುಲ್ ನಾಯಕತ್ವದಲ್ಲಿ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ ಎಂದು ಹೇಳಿತ್ತು ಎಂದು ಜೇಟ್ಲಿ ನೆನಪಿಸಿದರು.
ಯುಪಿಎ ಸರ್ಕಾರವು ಒಂಬತ್ತು ಮಾಜಿ ಮುಖ್ಯಮಂತ್ರಿಗಳನ್ನು ಹೊಂದಿದ್ದರೂ, ಅವರು ತಮ್ಮ ಆಡಳಿತೆಗಾಗಿ ಖ್ಯಾತಿಹೊಂದಿರುವವರೇನೂ ಅಲ್ಲ" ಎಂದು ಹೆಸರು ಹೇಳಲಿಚ್ಚಿಸದ ಇತರ ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಪಿಎ ಮಂತ್ರಿ ಮಂಡಳದ ಸರಾಸರಿ ವಯಸ್ಸು 57 ವರ್ಷಗಳು. ಸಂಪುಟದಲ್ಲಿ ಯುವಮುಖಗಳಿದ್ದರೂ, ಅವರು ಪ್ರಮುಖ ಖಾತೆಗಳನ್ನು ಹೊಂದಲು ತುಂಬ ಅನನುಭವಿಗಳು ಎಂಬುದು ಬಿಜೆಪಿ ಅಭಿಪ್ರಾಯ.
|