15 ನೇ ಲೋಕಸಭಾಧ್ಯಕ್ಷರ ಪಟ್ಟವನ್ನು ಈ ಬಾರಿ ಮಹಿಳೆ ಅಲಂಕರಿಸಲಿದ್ದಾರೆಯೇ? ಹೌದೆಂಬಂತೆ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಿರುವ ಯುಪಿಎ ಸರ್ಕಾರ ಶನಿವಾರ ಅಂತಹ ನಿರ್ಧಾರಕ್ಕೆ ಬಂದಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಲೋಕಸಭಾ ಅಧ್ಯಕ್ಷರಾಗಿ ಬಹುತೇಕ ಗಿರಿಜಾ ವ್ಯಾಸ್ ಅಥವಾ ಮೀರಾ ಕುಮಾರ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.
ಲೋಕಸಭಾ ಅಧ್ಯಕ್ಷರ ಆಯ್ಕೆ ಕುರಿತು ಸೋನಿಯಾ ಗಾಂಧಿ, ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಚರ್ಚೆ ನಡೆಸುತ್ತಿದ್ದು, ಮಹಿಳೆಯೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳಿರುವುದಾಗಿ ಬಲ್ಲ ಮೂಲಗಳು ಹೇಳಿವೆ.
ಇಂದು ಬೆಳಿಗ್ಗೆ ಆಂಧ್ರಪ್ರದೇಶದ ಅರಕು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಸಂಸದ ಕಿಶೋರ್ ಚಂದ್ರ ದೇವೋ ಅವರು ಲೋಕಸಭಾಧ್ಯಕ್ಷರಾಗುವ ಸಾಧ್ಯತೆಗಳಿವೆ ಎಂದು ಸುದ್ದಿ ಸ್ಫೋಟಗೊಂಡಿತ್ತು.
ಇಂದು ಪ್ರಧಾನಮಂತ್ರಿ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ಕಿಶೋರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು ಎಂದು ವರದಿಯಾಗಿತ್ತು. ಸಂಜೆ ವೇಳೆಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದೆವೆಯಾದರು ಕೂಡ ಒಟ್ಟಾರೆ ಅಂತಿಮವಾಗಿ ಮಹಿಳಾ ಸ್ಪೀಕರ್‌ಯೊಬ್ಬರು ಆಯ್ಕೆ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮತ್ತೊಂದು ಐತಿಹಾಸಿಕ ಮೈಲಿಗಲ್ಲೊಂದನ್ನು ನೆಡಲು ಸಿದ್ದವಾಗಿದೆ. |