ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರಿಗೆ ಕರೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ಸ್ಥಾನದ ಆಹ್ವಾನವನ್ನು ವಿರೋಧ ಪಕ್ಷಕ್ಕೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದಾರೆ.
ಶನಿವಾರ ಸಾಯಂಕಾಲ ಆಡ್ವಾಣಿಯವರಿಗೆ ಕರೆ ನೀಡಿರುವ ಸಿಂಗ್, ಲೋಕಸಭಾ ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ಆಯ್ಕೆಯ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಪ್ರದಾಯದ ಪ್ರಕಾರ ಲೋಕಸಭಾ ಉಪಾಧ್ಯಕ್ಷರ ಸ್ಥಾನ ವಿರೋಧ ಪಕ್ಷಕ್ಕೆ ಸಲ್ಲುತ್ತದೆ.
ಬಿಜೆಪಿಯ ಸಂಸದೀಯ ಮಂಡಳಿಯು ಭಾನುವಾರ ಸಭೆ ಸೇರಿ ಡೆಪ್ಯುಟಿ ಸ್ಪೀಕರ್ ಆಯ್ಕೆ ನಡೆಸುವ ಕುರಿತು ಚರ್ಚಿಸಲಿದೆ. ಬಿಜೆಪಿಯು ಈ ಸ್ಥಾನವನ್ನು ಸ್ವೀಕರಿಸಿದರೆ, ಬಿಜೆಪಿಯ ಹಿರಿಯ ಸಂಸದ ಇಂದೋರ್‌ನ ಸುಮಿತ್ರಾ ಮಹಾಜನ್ ಅವರು ಈ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ. ಅಥವಾ ಬಿಜೆಪಿಯು ಈ ಸ್ಥಾನವನ್ನು ತನ್ನ ಮಿತ್ರಪಕ್ಷ ಜೆಡಿಯುಗೆ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. |