ರಾಷ್ಟ್ರದಲ್ಲಿ ಉತ್ತಮ ಭದ್ರತಾ ವಾತಾವರಣವನ್ನು ನಿರ್ಮಿಸುವ ಉದ್ದೇಶದಲ್ಲಿ ಗೃಹಸಚಿವ ಪಿ. ಚಿದಂಬರಂ ಅವರು 100 ದಿನಗಳ ಕ್ರಿಯಾಯೋಜನೆಯನ್ನು ರೂಪಿಸಿದ್ದು, ಇದರಲ್ಲಿ ನಕ್ಸಲ್ ದಮನ, ಎನ್ಎಸ್‌ಜಿ ಹಬ್‌ಗಳನ್ನು ಕಾರ್ಯಗತಗೊಳಿಸುವುದು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚು ಅಧಿಕಾರ ಒದಗಿಸುವುದು ಸೇರಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ನಿರ್ದೇಶನದನದನ್ವಯ ಗೃಹಸಚಿವಾಲಯ ಈ ಕ್ರಿಯಾಯೋಜನೆಯನ್ನು ರೂಪಿಸಿದ್ದು ಇದನ್ನು ಸೋಮವಾರ ಜಾರಿಗೆ ತರಲಾಗುವುದು. ಈ ಕ್ರಿಯಾ ಯೋಜನೆಯು ನಕ್ಸಲ್ ಸಮಸ್ಯೆ, ಪಂಥೀಯ ಹಿಂಸಾಚಾರವನ್ನು ತಡೆಗಟ್ಟಲು ನಿರ್ದಿಷ್ಟವಾಗಿ ಕಾರ್ಯರೂಪಿಸಲಿದೆ.
ನಕ್ಸಲರ ವಿರುದ್ಧ ಜಂಟಿ ಕಾರ್ಯಾತರಣೆ ನಡೆಸುವದು ಕ್ರಿಯಾಯೋಜನೆ ಉದ್ದೇಶವಾಗಿದೆ.
ಮುಂದಿನ 100 ದಿನಗಳೊಳಗಾಗಿ ಮುಂಬೈ, ಕೋಲ್ಕತಾ, ಹೈದರಾಬಾದ್ ಮತ್ತು ಚೆನ್ನೈಗಳಲ್ಲಿ ಎಸ್ಎಸ್‌ಜಿ ಹಬ್‌ಗಳ ಸ್ಥಾಪನೆಯನ್ನು ಕ್ರಿಯಾ ಯೋಜನೆ ಉದ್ದೇಶಿಸಿದೆ. ಹಾಗಾಗಿ ನಾಲ್ಕು ಪ್ರಮುಖ ನಗರಗಳಲ್ಲಿ ಪರಿಣಿತ ಕಮಾಂಡೋ ಪಡೆಯು ನಿಯೋಜಿತವಾಗುತ್ತದೆ ಎಂದು ಮೂಲಗಳು ತಿಳಿಸಿವೆ. |