ನಗರದ ಹೊರವಲಯದ ಕಾಗೌಲ್ ಎಂಬಲ್ಲಿನ ಖಾಸಗಿ ಅತಿಥಿ ಗೃಹದ ಕೊಠಡಿಯೊಂದರಲ್ಲಿ ಆಸ್ಟ್ರೇಲಿಯಾದ ಪ್ರವಾಸಿ ಮೈಕೆಲ್ ಡೇವಿಡ್ ಎಂಬವರು ನಿಗೂಢವಾಗಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.
ಅತಿಥಿಗೃಹದ ಮ್ಯಾನೇಜರ್ ನೀಡಿರುವ ದೂರಿನಾಧಾರದಲ್ಲಿ ಸ್ಥಳಕ್ಕೆ ತೆರಳಿದ್ದ ಪೊಲೀಸರು ಕೊಠಡಿಯ ಬಾಗಿಲನ್ನು ಮುರಿದು ಒಳತೆರಳಿದ ವೇಳೆ 57ರ ಹರೆಯದ ಮೈಕೆಲ್ ಡೇವಿಜ್ ಒಸ್ಬೋರ್ನ್ ಅವರು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಪೊಲೀಸಧಿಕಾರಿ ದಿಲ್ನವಾಜ್ ಖಾನ್ ತಿಳಿಸಿದ್ದಾರೆ.
ಮೃತ ಮೈಕೆಲ್ ಶುಕ್ರವಾರ ಅತಿಥಿಗೃಹದಲ್ಲಿ ಬಂದಿಳಿದಿದ್ದರು. ಭಾನುವಾರ ರೂಂಬಾಯ್ ಬಾಗಿಲು ಬಡಿದಾಗ ಒಳಗಿನಿಂದ ಉತ್ತರವೇ ಬಾರದಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ತಿಳಿಸಲಾಗಿತ್ತು. ಅವರ ದೇಹದಲ್ಲಿ ಯಾವುದೇ ಗಾಯಗಳು ಕಂಡು ಬಂದಿಲ್ಲ. ಪ್ರವಾಸಿ ತಂಗಿದ್ದ ಕೊಠಡಿಯಲ್ಲಿ ಪಾಸ್ಪೋರ್ಟ್ ಹಾಗೂ ಕೆಲವು ಔಷಧಿಗಳು ಹಾಗೂ ಔಷಧಿ ಚೀಟಿಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಪಾಸ್ಪೋರ್ಟ್ನಲ್ಲಿರುವ ಮಾಹಿತಿ ಪ್ರಕಾರ ಮೈಕೆಲ್ ಮೆಲ್ಬೋರ್ನ್ನವರಾಗಿದ್ದಾರೆ. ಹಿರಿಯ ಅಧಿಕಾರಿಗಳಿಂದ ಸೂಚನೆಗಳನ್ನು ಪಡೆದ ಬಳಿಕ ಮೃತದೇಹವನ್ನು ಆಸ್ಟ್ರೇಲಿಯಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ನುಡಿದರು. |