ನೂತನ ಆರೋಗ್ಯ ಸಚಿವ ಗುಲಾಂನಬಿ ಆಜಾದ್ ಅವರ ಚಿಂತನೆಯು ಹಿಂದಿನ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ಗಿಂತ ಭಿನ್ನವಾಗಿದೆ. ಅಜಾದ್ ಅವರು ಸಿನಿಮಾಗಳಲ್ಲಿ ಧೂಮಪಾನದ ಕುರಿತು ಉದಾರವಾಗಿದ್ದಾರೆ. " ಸಿನಿಮಾವು ಮನೋರಂಜನೆಯ ಉದ್ದೇಶದ್ದಾಗಿದೆ. ಇದಕ್ಕೂ ತಂಬಾಕು ಸೇವನೆಗೂ ಸಂಬಂಧ ಇದೆ ಎಂದು ನನಗನಿಸುವುದಿಲ್ಲ" ಎಂಬುದಾಗಿ ಅವರು ಹೇಳಿದ್ದಾರೆ. ಇದು ಮಾಜಿ ಆರೋಗ್ಯ ಸಚಿವ ಅನ್ಬುಮಣಿಯವರ ನೀತಿಗೆ ತದ್ವಿರುದ್ಧವಾಗಿದೆ. ಅವರು ಸಿನಿಮಾಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಧೂಮಪಾನವನ್ನು ನಿಷೇಧಿಸಲು ಮುಂದಾಗಿದ್ದರು.ಸಿನಿಮಾಗಳಲ್ಲಿ ಧೂಮಪಾನ ನಿಷೇಧದ ಸರ್ಕಾರಿ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ಕಳೆದ ಜನವರಿಯಲ್ಲಿ ತಳ್ಳಿಹಾಕಿದ್ದು, ಇದು ಸಿನಿಮಾ ನಿರ್ಮಾಪಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಹೇಳಿತ್ತು. |