ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್‌ಗೆ ನೇಮಿಸಲಾಗಿರುವ ವಕೀಲ ಅಬ್ಬಾಸ್ ಕಾಜ್ಮಿ ಅವರು ಸಂಭಾವನೆಯಾಗಿ ದಿನಒಂದರ 2,500 ರೂಪಾಯಿಯನ್ನು ಮಹಾರಾಷ್ಟ್ರ ಸರ್ಕಾರದಿಂದ ಪಡೆಯಲಿದ್ದಾರೆ. ವಾರದ ಐದು ದಿನದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತದೆ. ಸೋಮವಾರದಿಂದ ಶುಕ್ರವಾರದ ತನಕ ವಿಚಾರಣೆ ನಡೆಯುತ್ತಿದ್ದು, ಇವರು ವಾರ ಒಂದರ 12,500 ಹಾಗೂ ತಿಂಗಳೊಂದರ 50,000 ರೂಪಾಯಿ ಪಡೆಯುತ್ತಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.ಆರೋಪಿಯೊಬ್ಬನಿಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ, ನ್ಯಾಯಾಲಯವು ರಾಜ್ಯದ ಕಾನೂನು ಸಹಾಯ ಸಂಸ್ಥೆಯ ವಕೀಲರೊಬ್ಬರನ್ನು ನೇಮಿಸುತ್ತದೆ. ನ್ಯಾಯಾಲಯ ನೇಮಿಸಿದ ವಕೀಲರು ಸಂಭಾವನೆಯಾಗಿ ಸಂಪೂರ್ಣ ಪ್ರಕರಣಕ್ಕೆ 900 ರೂಪಾಯಿ ನೀಡಲಾಗುತ್ತದೆ. ಹಾಗಾಗಿ ಇಂತರ ಪ್ರಕರಣಗಳನ್ನು ಪ್ರತಿನಿಧಿಸಲು ಕೆಲವೇ ಕೆಲವು ಮಂದಿ ಮುಂದೆ ಬರುತ್ತಾರೆ.ಆದರೆ ಪ್ರಸ್ತುತ ಪ್ರಕರಣದ ಸೂಕ್ಷ್ಮತೆಯನ್ನು ಮನಗಂಡು ನ್ಯಾಯಾಲಯ ಕಾಜ್ಮಿಯವರನ್ನು ನೇಮಿಸಿದೆ. ಅಲ್ಲದೆ ಉಚಿತವಾದ ಮೊತ್ತವನ್ನು ಸಂಭಾನೆಯಾಗಿ ನೀಡಲು ಮಹಾರಾಷ್ಟ್ರ ಸರ್ಕಾರವನ್ನು ಕೋರಿತ್ತು.ಕಸಬ್ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಲಾಗಿದ್ದು ಆತನ ವಕೀಲರ ಸಂಭಾವನೆ ನಿಗದಿ ಮಾಡಲಾಗಿದೆ ಮತ್ತು ಇದನ್ನೇ ಇತರ ಪ್ರಕರಣಗಳಿಗೆ ಮಾದರಿಯಾಗಿಸುವಂತಿಲ್ಲ ಎಂಬುದಾಗಿ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಸ್ಪಷ್ಟಪಡಿಸಿದ್ದಾರೆ. |