ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಧರ್ಮ, ಜಾತಿ ಆಧಾರದಲ್ಲಿ ಕ್ಷಮಾದಾನ ಸಲ್ಲ: ಸು.ಕೋ.
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧರ್ಮ, ಜಾತಿ ಆಧಾರದಲ್ಲಿ ಕ್ಷಮಾದಾನ ಸಲ್ಲ: ಸು.ಕೋ.
ಸರಕಾರವು ಸಾರ್ವಜನಿಕ ಮತ್ತು ಸಮಾಜದ ಹಿತ ದೃಷ್ಟಿಯಿಂದ ವರ್ತಿಸಬೇಕೇ ಹೊರತು, ಧರ್ಮ, ಜಾತಿ ಮತ್ತು ರಾಜಕೀಯ ನಿಷ್ಠೆಯ ಆಧಾರದಲ್ಲಿ ತಪ್ಪಿತಸ್ಥರನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟು ತೀರ್ಪು ನೀಡುವುದರೊಂದಿಗೆ, ಆಂಧ್ರಪ್ರದೇಶದ ಕಾಂಗ್ರೆಸ್ ಸರಕಾರವು ತೀವ್ರ ಮುಖಭಂಗ ಅನುಭವಿಸಿದೆ.

ಸಂವಿಧಾನದಲ್ಲಿರುವ ಇಂತಹ ಪರಮಾಧಿಕಾರಗಳನ್ನೆಲ್ಲ ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜದ ಹಿತದೃಷ್ಟಿ ಪರಿಗಣಿಸಿದ ಬಳಿಕವಷ್ಟೇ ಬಳಸಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಸ್.ಬಿ.ಸಿನ್ಹಾ ಮತ್ತು ಮುಕುಂದಮ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಮಂಗಳವಾರ ತೀರ್ಪು ನೀಡಿದೆ.

ನ್ಯಾಯಾಲಯದಿಂದ ಅಪರಾಧ ಸಾಬೀತಾದ ಅಪರಾಧಿಯೊಬ್ಬನ ಜಾತಿ, ಧರ್ಮ ಅಥವಾ ರಾಜಕೀಯ ನಿಷ್ಠೆಯನ್ನು ನೋಡಿ, ಶಿಕ್ಷೆ ಕಡಿತಕ್ಕೆ ಪರಿಗಣಿಸಬಾರದು ಎಂದು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾಲಯ ತಿಳಿಸಿದೆ.

ಹೈದರಾಬಾದಿನಲ್ಲಿ ಡಕಾಯಿತಿ, ಕ್ರಿಮಿನಲ್ ಅತಿಕ್ರಮಣ ಮತ್ತು ದಂಗೆ ಆರೋಪಗಳಲ್ಲಿ (1990ರ ಪ್ರಕರಣ) 2 ವರ್ಷಗಳ ಕಾರಾಗೃಹ ವಾಸ ಶಿಕ್ಷೆಗೆ ಗುರಿಯಾಗಿರುವ ಇಸ್ಲಾಮಿಕ್ ಪಂಡಿತ ಎಸ್.ಕಾಜಮ್ ಪಾಶಾ ಎಂಬಾತನ ಪರವಾಗಿ ಆಂಧ್ರಪ್ರದೇಶ ಸರಕಾರವು ನೀಡಿದ ಬಿಡುಗಡೆ ಆದೇಶಕ್ಕೆ ತಡೆಯಾಜ್ಞೆ ನೀಡುತ್ತಾ ಸುಪ್ರೀಂ ಕೋರ್ಟು ಈ ತೀರ್ಪು ನೀಡಿತು. ಕೆಳ ನ್ಯಾಯಾಲಯವೊಂದು ಆತನಿಗೆ 2 ವರ್ಷ ಶಿಕ್ಷೆ ವಿಧಿಸಿದ್ದು, ಹೈಕೋರ್ಟು ಕಾರಾಗೃಹ ಶಿಕ್ಷೆಯನ್ನು ಆರು ತಿಂಗಳಿಗೆ ಇಳಿಸಿತ್ತು. ಬಳಿಕ ಆಂಧ್ರ ಸರಕಾರವು ಸಿಆರ್‌ಪಿಸಿ ಸೆಕ್ಷನ್ 433 ಅನುಸಾರ ತನ್ನ ವಿವೇಚನಾ ಅಧಿಕಾರ ಬಳಸಿಕೊಂಡು 5000 ರೂ. ದಂಡ ವಿಧಿಸಿ ಆತನನ್ನು ಬಿಡುಗಡೆಗೊಳಿಸಿತ್ತು. ಪಾಶಾ ಕೃತ್ಯದಿಂದ ನೊಂದಿದ್ದ ಪ್ರತಿವಾದಿ ಮಹಮದ್ ಇಶಾಕ್ ಸುಪ್ರೀಂಕೋರ್ಟಿನಲ್ಲಿ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದರು.

ಅಪರಾಧಿಯು ಇಸ್ಲಾಮಿಕ್ ವಿದ್ವಾಂಸನಾಗಿದ್ದು, ನಗರದ ಕೋಮು ಸೌಹಾರ್ದತೆಗೆ ಶ್ರಮಿಸಿದ್ದ, ಆತ ಸ್ಥಳೀಯ ಶಾಂತಿ ಸಮಿತಿಯ ಸದಸ್ಯ ಮತ್ತು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾನೆ ಎಂಬ ಕಾರಣ ನೀಡಿ ರಾಜ್ಯ ಸರಕಾರವು ಆತನಿಗೆ ಕೇವಲ 5000 ರೂ. ದಂಡ ವಿಧಿಸಿ ಬಿಡುಗಡೆ ಮಾಡಿತ್ತು. ಆದರೆ ಅವಧಿಪೂರ್ವ ಬಿಡುಗಡೆಗೆ ನೀಡಲಾಗಿರುವ ಕಾರಣಗಳಲ್ಲಿ ಒಂದಾದ ಅನಾರೋಗ್ಯ ಕುರಿತು ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸರಕಾರ ವಿಫಲವಾಗಿತ್ತು.

ಹೈಕೋರ್ಟು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಬಳಿಕವೂ ತಲೆಮರೆಸಿಕೊಂಡಿದ್ದಲ್ಲದೆ, ಕಾನೂನಿಗೆ ಅವಿಧೇಯತೆ ತೋರಿದ್ದ ಪಾಶಾನಂತಹವರಿಗೆ ಕ್ಷಮಾದಾನ ನೀಡುವಂತಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಯೀದ್ ಬಿಡುಗಡೆ: ಪಾಕ್ ಬದ್ಧತೆ ಪ್ರಶ್ನಿಸಿದ ಭಾರತ
ಕಾಶ್ಮೀರ: ಮುಂದುವರಿದ ಹಿಂಸಾಚಾರ
ಕಸಬ್ ವಕೀಲರ ಸಂಬಳ ದಿನಕ್ಕೆ 2,500ರೂ
ಸ್ಪೀಕರ್ ನಾಮನಿರ್ದೇಶನ ಐತಿಹಾಸಿಕ ಕ್ಷಣ: ಮೀರಾ
ಬುಡಕಟ್ಟು ನಾಯಕ ಕೈರಾ ಮುಂಡಾ ಡೆಪ್ಯೂಟಿ ಸ್ಪೀಕರ್
ಕಿರಿಯ ಸಂಸದನಿಗಾಗಿ ಕಾನೂನಿಗೆ ತಿದ್ದುಪಡಿ!