ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಹಿಳಾ ಸ್ಪೀಕರ್ ಆಗಿ ಚರಿತ್ರೆ ಬರೆದ ಮೀರಾ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳಾ ಸ್ಪೀಕರ್ ಆಗಿ ಚರಿತ್ರೆ ಬರೆದ ಮೀರಾ ಕುಮಾರ್
PTI
ಕಾಂಗ್ರೆಸ್‌ನ ಮೀರಾ ಕುಮಾರ್ ಅವರು ಹದಿನೈದನೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಗೊಳ್ಳುವ ಮೂಲಕ, ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಎಂಬುದಾಗಿ ಭಾರತೀಯ ಇತಿಹಾಸದಲ್ಲಿ ದಾಖಲಾದರು.

ಮೀರಾ ಕುಮಾರ್ ಅವರನ್ನು ಧ್ವನಿಮತದ ಮ‌ೂಲಕ ಔಪಚಾರಿಕ ಆಯ್ಕೆ ಮಾಡಲಾಯಿತು. ಅವಿರೋಧ ಆಯ್ಕೆಯ ಬಳಿಕ ಪ್ರಧಾನಿ ಮನಮೋಹನ್ ಸಿಂಗ್, ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಲೋಕಸಭೆಯ ನಾಯಕ ಪ್ರಣಬ್ ಮುಖರ್ಜಿ ಅವರುಗಳು ಸ್ಪೀಕರ್ ಸ್ಥಾನಕ್ಕೆ ಕರೆದೊಯ್ದರು.

ಸ್ಪೀಕರ್ ಅವರು ತಮ್ಮ ಆಸ್ಥಾನ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ, ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ವಿವಿಧ ಪಕ್ಷಗಳ ಮುಖಂಡರು ಮೀರಾ ಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ ಮೀರಾ ಅವರು ತಮ್ಮ ಅನುಭವಗಳ ಆಧಾರದಲ್ಲಿ ಉತ್ತಮ ಕಾರ್ಯ ನಿರ್ವಹಿಸುವರೆಂಬ ಆಶಾವಾದ ವ್ಯಕ್ತಪಡಿಸಿದರು. ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಮಹಿಳೆಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸ್ಫರ್ಧೆಯಲ್ಲಿದ್ದ ಏಕೈಕ ಅಭ್ಯರ್ಥಿಯಾಗಿದ್ದ ದಲಿತ ನಾಯಕಿ ಮೀರಾ ಕುಮಾರ್ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದರು. ಪ್ರಮುಖ ವಿರೋಧ ಪಕ್ಷ ಬಿಜೆಪಿಯೂ ಸೇರಿದಂತೆ 13 ಪಕ್ಷಗಳು ಅವರ ಅಭ್ಯರ್ಥಿತನಕ್ಕೆ ಬೆಂಬಲ ಸೂಚಿಸಿದ್ದರು.

ಸ್ಪೀಕರ್ ಅಭ್ಯರ್ಥಿಯಾಗಿ ಮೀರಾ ಅವರನ್ನು ಪಕ್ಷವು ಆಯ್ಕೆ ಮಾಡಿದ್ದ ಹಿನ್ನೆಲೆಯಲ್ಲಿ ಅಧಿಕಾರ ವಹಿಸಿದ್ದ ಎರಡೇ ದಿನಕ್ಕೆ ಮೀರಾ ಅವರು ಮ‌ೂರೇ ದಿನಗಳಲ್ಲಿ ತಮ್ಮ ಮಹತ್ವದ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೀರಾ

ಸ್ಪೀಕರ್ ಹುದ್ದೆಗೆ ಮಹಿಳೆಯೊಬ್ಬರನ್ನು ಪರಿಗಣಸಿರುವುದು ಐತಿಹಾಸಿಕ ಹಾಗೂ ಅತ್ಯಂತ ಸಂತಸದ ಕ್ಷಣ ಎಂಬುದಾಗಿ ಮೀರಾ ಕುಮಾರ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದರು. ಇವರು ಮಾಹಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಪುತ್ರಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಯೀದ್ ಬಿಡುಗಡೆ: ಪ್ರಧಾನಿ ಭೇಟಿ ಮಾಡಿದ ಎಸ್ಸೆಂಕೆ
ದೊಡ್ಡಮ್ಮ, ಚಿಕ್ಕಮ್ಮರಿಗೆ ವಂದಿಸಿದ ವರುಣ್-ರಾಹುಲ್
ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕಾರ
ಲೋಕಸಭಾ ಸ್ಪೀಕರ್ ಆಯ್ಕೆ ಇಂದು
ಬರ್ತ್‌ಡೇ ಗಿಫ್ಟ್: ತಮಿಳು ಹೆಸರಿಟ್ಟರೆ ಚಿನ್ನದ ಉಂಗುರ‍ !
ಧರ್ಮ, ಜಾತಿ ಆಧಾರದಲ್ಲಿ ಕ್ಷಮಾದಾನ ಸಲ್ಲ: ಸು.ಕೋ.