ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಔಪಚಾರಿಕವಾಗಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಅವರು ಸರ್ಕಾರದ ಹತ್ತು ಪ್ರಮುಖ ಆದ್ಯತೆಗಳನ್ನು ಅನಾವರಣಗೊಳಿಸಿದರು.ಪ್ರಧಾನಿ ಮನಮೋಹನ್ ಸಿಂಗ್ ಅವರು ಅತ್ಯಂತ ಶ್ರದ್ಧೆಯಿಂದ ಸಿದ್ಧಪಡಿಸಿರುವ ರಾಷ್ಟ್ರಪತಿ ಭಾಷಣದಲ್ಲಿ ಯುಪಿಎ ಸರ್ಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳು ಸೇರಿದಂತೆ ಸರ್ಕಾರದ ಕಾರ್ಯಸೂಚಿಯನ್ನು ಪ್ರಸ್ತುತ ಪಡಿಸಲಾಯಿತು.ಪ್ರಧಾನಿ ಅವರು ಭರವಸೆ ನೀಡಿರುವ ಮಹತ್ವಾಕಾಂಕ್ಷಿ 100 ದಿನಗಳ ಕ್ರಿಯಾ ಯೋಜನೆಯಂತೆ ಯುಪಿಎ ಸರ್ಕಾರದ ಆದ್ಯತೆಯ ಹತ್ತು ವಿಸ್ತೃತ ಯೋಜನೆಗಳಿಗೆ ರಾಷ್ಟ್ರಪತಿ ಭಾಷಣದಲ್ಲಿ ಒತ್ತು ನೀಡಲಾಗಿದೆ. ಅವುಗಳೆಂದರೆ, *ಆಂತರಿಕ ಭದ್ರತೆ ಹಾಗೂ ಕೋಮುಸೌಹಾರ್ದದ ಸಂರಕ್ಷಣೆ *ಕೃಷಿ, ಉತ್ಪಾದನೆ ಹಾಗೂ ಸೇವಾ ವಲಯದಲ್ಲಿ ಆರ್ಥಿಕ ಅಭಿವೃದ್ಧಿಯ ಹೆಚ್ಚಳ *ಅಸ್ತಿತ್ವದಲ್ಲಿರುವ ಪ್ರಮುಖ ಯೋಜನೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲ ಸೌಕರ್ಯ, ನಗರದ ಪುನರುತ್ಥಾನಗಳ ಕ್ರೋಡೀಕರಣ ಮತ್ತು ಆಹಾರ ಭದ್ರತೆ ಹಾಗೂ ಚಾತುರ್ಯ ಅಭಿವೃದ್ಧಿ ಯೋಜನೆಗಳ ಜಾರಿ. *ಸುದೃಢ ಸಾಮಾಕ ರಕ್ಷಣೆಯೊಂದಿಗೆ ಮಹಿಳೆಯರು, ಯುವಜನತೆ, ಮಕ್ಕಳು, ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಸಂಘಟಿತ ಕಾರ್ಯ*ಆಡಳಿತ ಸುಧಾರಣೆ*ಪ್ರಮುಖ ವಲಯಗಳಲ್ಲಿ ಮೂಲಸೌಕರ್ಯಗಳ ಅಧುನೀಕರಣದ ಸೃಷ್ಟಿ ಮತ್ತು ಸಾಮರ್ಥ್ಯ ಸೇರ್ಪಡೆ*ವಿವೇಕಯುತವಾದ ವಿತ್ತೀಯ ನಿರ್ವಹಣೆ*ಇಂಧನ ಭದ್ರತೆ ಹಾಗೂ ಪರಿಸರ ಸಂರಕ್ಷಣೆ*ವಿಶ್ವದೊಂದಿಗೆ ರಚನಾತ್ಮಕ ಹಾಗೂ ಸೃಜನಶೀಲ ಸಂಬಂಧ*ಔದ್ಯಮಿಕ ಮತ್ತು ಆವಿಷ್ಕಾರ ಸಂಸ್ಕೃತಿಗೆ ಉತ್ತೇಜನಇದಲ್ಲದೆ, ಮಹಿಳಾ ವಿಧೇಯಕವನ್ನು 100 ದಿನಗಳೊಳಗಾಗಿ ಮಂಡಿಸಲಾಗುವುದು ಎಂದು ಅವರು ತಮ್ಮ ಭಾಷಣದಲ್ಲಿ ನುಡಿದರು.ರಾಷ್ಟ್ರಪತಿಯವರ ಭಾಷಣದ ಮೇಲೆ ಜೂನ್ 5, 9 ಮತ್ತು 9ರಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚೆ ನಡೆಸಿ ಬಳಿಕ, ಸಂಸತ್ತನ್ನು ಮುಂದೂಡುವ ಮುನ್ನ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸಲಾಗುವುದು. |