ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಭದ್ರತಾ ಪಡೆಗಳು ಅಪಾರ ಪ್ರಮಾಣದ ಚೀನ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಇದನ್ನು ಉಗ್ರಗಾಮಿ ಸಂಘಟನೆಗಳು ಅಡಗಿಸಿಟ್ಟಿರಬಹುದು ಎಂದು ಸಂಶಯಿಸಲಾಗಿದೆ.
ಚೀನದಲ್ಲಿ ನಿರ್ಮಿತವಾಗಿರುವ ಹಲವಾರು ಪಿಸ್ತೂಲ್‌ಗಳು, ಮ್ಯಾಗಜಿನ್‌ಗಳು, ಎಕೆ ಶಸ್ತ್ರಾಸ್ತ್ರಗಳು, ಐಇಡಿಗಳು ಹಾಗೂ ನೂರಾರು ಸಜೀವ ತೋಟಾಗಳನ್ನು ಸೇನಾ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಾಂತ್ಯದಲ್ಲಿ ಉಗ್ರರ ಅಡಗುತಾಣ ಇರುವ ಸಾಧ್ಯತೆಯ ಕುರಿತು ಲಭಿಸಿದ ಹಿತಿಯಾಧಾರದಲ್ಲಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗಿತ್ತು.
ಪಾಕಿಸ್ತಾನವು ಅಂತಾರಾಷ್ಟ್ರೀಯ ಗಡಿಪ್ರದೇಶದಲ್ಲಿ ಕದನವಿರಾಮ ಉಲ್ಲಂಘನೆ ಮಾಡಿರುವ ಮರುದಿವಸದಂದೇ ಪತ್ತೆಯಾಗಿದೆ. ಇದು ಉಗ್ರರು ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಅಲ್ಲದೆ, ಪಾಕಿಸ್ತಾನದ ಭಯೋತ್ಪಾದನಾ ಕೃತ್ಯಗಳಿಗೆ ಚೀನ ಕುಮ್ಮಕ್ಕು ನೀಡುತ್ತಿದೆ ಎಂಬ ಸಂಶಯವೂ ಇದರಿಂದಾಗಿ ದಟ್ಟವಾಗಿದೆ.
ಶಸ್ತ್ರಾಸ್ತ್ರಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೇನೆಯು ತೀವ್ರ ಶೋಧಕಾರ್ಯಾಚರಣೆ ಆರಂಭಿಸಿದೆ. ಇನ್ನಷ್ಟು ಅಡಗು ತಾಣಗಳನ್ನು ಪತ್ತೆ ಹಚ್ಚುವುದು ಅದರ ಉದ್ದೇಶವಾಗಿದೆ. |