ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಮರ್ ಮದನಿ ಹಫೀಜ್ ಸಹಚರ: ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಮರ್ ಮದನಿ ಹಫೀಜ್ ಸಹಚರ: ಚಿದಂಬರಂ
ನವೆಂಬರ್ 26ರಂದು ಮುಂಬೈಯಲ್ಲಿ ನಡೆಸಿರುವ ಹೇಯ ನರಮೇಧ ಕೃತ್ಯದ ರೂವಾರಿ ಲಷ್ಕರ್-ಇ-ತೋಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್‌ನ ಬಲಗೈ ಬಂಟ ಪಾಕಿಸ್ತಾನ ಪ್ರಜೆ ಮೊಹಮ್ಮದ್ ಒಮರ್ ಮದನಿಯನ್ನು ಹಳೆ ದೆಹಲಿಯಲ್ಲಿ ಬಂಧಿಸಲಾಗಿದೆ ಎಂಬುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಹಫೀಜ್ ಸಯೀದ್‌ನ ಸಹಚರ ಎಂಬುದಾಗಿ ಗೃಹಸಚಿವ ಚಿದಂಬರಂ ದೃಢಪಡಿಸಿದ್ದಾರೆ.

ದೆಹಲಿಯ ಮೆಹ್ರೌಲಿ ಪ್ರದೇಶದ ಕುತುಬ್ ಮಿನಾರ್ ಸಮೀಪದಲ್ಲಿ ಗುರುವಾರ ಸಾಯಂಕಾಲ ಮದನಿಯನ್ನು ದೆಹಲಿ ಪೊಲೀಸ್‌ನ ಉಗ್ರನಿಗ್ರಹ ದಳವು ಬಂಧಿಸಿದೆ.

ಈತ ಭಾರತದಲ್ಲಿ ಲಷ್ಕರೆ ಸಂಘಟನೆಗೆ ಹಣ ಒದಗಿಸುತ್ತಿದ್ದ ಎಂಬ ಅಂಶ ಯಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ನೇಪಾಳದಲ್ಲಿ ಕಳೆದೊಂದು ವರ್ಷದಿಂದ ನೆಲೆಸಿದ್ದ ಈತ ಪಾಟ್ನಾ ಮೂಲಕ ದೆಹಲಿ ಪ್ರವೇಶಿಸಿದ್ದಾನೆ.

ಬಂಧಿತ ಉಗ್ರ ಒಮರ್ ಮದನಿ ನೇಪಾಳ ಹಾಗೂ ಭಾರತದಲ್ಲಿ ಲಷ್ಕರೆ ಸಂಘಟನೆಗೆ ಕಾರ್ಯಕರ್ತರನ್ನು ನೇಮಕ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಉಗ್ರಗಾಮಿ ಸಂಘಟನೆ ಲಷ್ಕರೆಗೆ ಹಣಕಾಸು ಒದಗಿಸುತ್ತಿದ್ದ ಎನ್ನಾಲಾಗಿದೆ.

2000ದಿಂದ ಹಫೀಜ್‌ನ ನಿಕಟವರ್ತಿಯಾಗಿದ್ದ ಮದನಿ ಲಷ್ಕರೆಗಾಗಿ 'ಪ್ರತಿಭಾ ಶೋಧನೆ'ಯಲ್ಲಿ ತೊಡಗಿದ್ದ. ಹಫೀಜ್ ಜಮಾತೆ ಉದ್ ದಾವ ಸಂಘಟನೆಯ ಮುಖ್ಯಸ್ಥ. ಇದು ಲಷ್ಕರೆ ಸಂಘಟನೆಯ ಇನ್ನೊಂದು ಮುಖವೆಂದು ವಿಶ್ವಸಂಸ್ಥೆಯು ಈ ಸಂಘಟನೆಯನ್ನು ನಿಷೇಧಿಸಿದೆ.

ಗೃಹ ಬಂಧನದಲ್ಲಿದ್ದ ಸಯೀದ್‌ನನ್ನು ಇತ್ತೀಚೆಗೆ ಲಾಹೋರ್ ಹೈಕೋರ್ಟ್ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದೆ.

ಮದನಿಯು ಹಲವಾರು ಯುವಕರನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ತರಬೇತಿ ಶಿಬಿರಗಳಿಗೆ ಕಳುಹಿಸಿದ್ದಾನೆ ಎಂದು ತನಿಖೆಯ ವೇಳೆಗೆ ತಿಳಿಸಿದ್ದಾನೆ.

ಮದನಿಯಿಂದ ನೇಪಾಳಿ ಪ್ರಜೆ ಎಂಬ ಗುರುತಿನ ಚೀಟಿ, ಆಲಿಗಢದಿಂದ ದೆಹಲಿಗೆ ಪ್ರಯಾಣಿಸಿರುವ ರೈಲ್ವೇ ಟಿಕೆಟ್, 8,000 ಅಮೆರಿಕನ್ ಡಾಲರ್, 15,000 ಭಾರತೀಯ ಕರೆನ್ಸಿ, 4,000 ನೇಪಾಳಿ ಕರೆನ್ಸಿ, ಗುರುತಿನ ಚೀಟಿ ಹಾಗೂ ಡ್ರೈವಿಂಗ್ ಲೈಸನ್ಸ್ ಅನ್ನು ಬಂಧಿತ ಒಮರ್‌ನಿಂದ ವಶಪಡಿಸಿಕೊಳ್ಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂತ ರಮಾನಂದರ ಅಂತ್ಯಕ್ರಿಯೆ, ಪರಿಸ್ಥತಿ ಶಾಂತ
ಆಸ್ತಿ ಬಹಿರಂಗ: ನ್ಯಾಯಾಂಗವೇ ಮೊದಲು ಚಿಂತಿಸಲಿ
ಪಾಕ್ ಕಾರ್ಯಕೈಗೊಳ್ಳುವ ತನಕ ಮಾತುಕತೆ ಇಲ್ಲ: ಕೃಷ್ಣ
ಸಮಾನತೆ ,ನ್ಯಾಯಕ್ಕಾಗಿ ಅಧಿಕಾರ : ಮಾಯಾವತಿ
ಎಸ್‌ಪಿಜಿಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿ
ಬೆದರಿಕೆ ಭಿತ್ತಿಪತ್ರ: ಕಂಧಮಾಲ್ ಮತ್ತೆ ಉದ್ವಿಗ್ನ?