ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಾಂದ್ ಬದುಕನ್ನು ಚಿಂದಿ ಮಾಡುವೆ: ಫಿಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಾಂದ್ ಬದುಕನ್ನು ಚಿಂದಿ ಮಾಡುವೆ: ಫಿಜಾ
PTI
ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ ಚಂದ್ರಮೋಹನ್ ಅವರ ಬದುಕನ್ನು ಚಿಂದಿಮಾಡದೆ ಬಿಡುವುದಿಲ್ಲ ಎಂಬುದಾಗಿ ಅವರಿಂದ ದೂರಸರಿದಿರುವ ದ್ವಿತೀಯ ಪತ್ನಿ ಫಿಜಾ ಅಲಿಯಾಸ್ ಅನುರಾಧ ಬಾಲಿ ಶುಕ್ರವಾರ ಶಪಥ ಮಾಡಿದ್ದಾರೆ.

"ಏನೇ ಆದರೂ ಅವರನ್ನು ಬಿಡೆ. ಅವರ ಬದುಕಿನ ಕರಾಳ ಅಧ್ಯಾಯವನ್ನು ಬರೆಯುತ್ತೇನೆ. ಅವರ ಬದುಕಿನ ಘೋರ ದಿನಗಳು ಆರಂಭವಾಗಿದೆ. ಖಂಡಿತವಾಗಿಯೂ ನಾನವರ ಬದುಕನ್ನು ಧ್ವಂಸಗೊಳಿಸದೆ ಬಿಡುವುದಿಲ್ಲ" ಎಂಬುದಾಗಿ ಕೆರಳಿದ ಸಿಂಹಿಣಿಯಂತಾಗಿರುವ ಫಿಜಾ ಹೇಳಿದ್ದಾರೆ. ಅವರು ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

"ಅವರು ದಿನ ಬೆಳಗೆದ್ದು ಕಾಳಿ ದೇವತೆಯ ಮುಖನೋಡಲಿ. ಕಾಳಿಯು ದುಷ್ಟಸಂಹಾರ ಮಾಡಿರುವ ರೀತಿಯಲ್ಲೇ ನಾನು ಅವರಿಗೆ ಉತ್ತಮ ಪಾಠ ಕಲಿಸಲಿದ್ದೇನೆ" ಎಂದು ಅನುರಾಧ ಗುಡುಗಿದ್ದಾರೆ.

ತಿಂಗಳುಗಳಕಾಲ ಭೂಗತವಾಗಿದ್ದ ಚಂದ್ರಮೋಹನ್ ಪಂಚಕುಲದ ತನ್ನ ನಿವಾಸದಲ್ಲಿ ಬುಧವಾರ ಸಾರ್ವಜನಿಕವಾಗಿ ಪ್ರತ್ಯಕ್ಷಗೊಂಡಿದ್ದು, ತಾನು ಅನುರಾಧ ಜತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಹೇಳಿದ್ದರು.

ಚಂದ್ರ ಮೋಹನ್ ತನಗೆ ಭರವಸೆ ನೀಡುವ ವೀಡಿಯೋ ಚಿತ್ರಣ ಮತ್ತು ಯಾವುದೇ ಬೆಲೆ ತೆತ್ತಾದರೂ ನಿನ್ನನ್ನು ಮದುವೆಯಾಗುತ್ತೇನೆ ಎಂಬುದಾಗಿ 2006ರಲ್ಲಿ ಚಂದ್ರ ಮೋಹನ್ ತನಗೆ ಕಳುಹಿಸಿ ಟೆಕ್ಸ್ಟ್ ಮೆಸೇಜ್ ಹಾಗೂ ಬರೆದಿರುವ ಪತ್ರಒಂದನ್ನು ಫಿಜಾ ಸುದ್ದಿಗಾರರಿಗೆ ತೋರಿಸಿದರು.

ನೀವು ಅವರನ್ನು ಭೇಟಿಯಾಗುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅನುರಾಧ "ಅವರು ನನ್ನ ಬಳಿ ಬಂದಿದ್ದರು. ನಾನೆಂದಿಗೂ ಅವರ ಬಳಿ ಹೋಗಿರಲಿಲ್ಲ. ನನ್ನನ್ನು ವಿವಾಹವಾಗಲು ಅವರು ಅತ್ಯಾಸಕ್ತರಾಗಿದ್ದರು. ಆತನನ್ನು ಎಲ್ಲೇ ಕಂಡರು ನಾನು ಕಪಾಳಕ್ಕೆ ಬಿಗಿಯುತ್ತೇನೆ. ನಾವು ಸಾರ್ವಜನಿಕವಾಗಿ ಸದ್ಯವೇ ಭೇಟಿಯಾಗಲಿದ್ದೇವೆ" ಎಂದರು.

ಚಂದ್ರಮೋಹನ್ ಅವರ ಕುಟುಂಬದ ಮೇಲೂ ಹರಿಹಾಯ್ದ ಫಿಜಾ "ಚಂದ್ರಮೋಹನ್ ಪತ್ನಿ ಸೀಮಾ ಬಿಶ್ನೋಯಿ ಒಬ್ಪ ದೊಡ್ಡ ಸುಳ್ಳುಗಾತಿ ಮತ್ತು ಆತನ ಇಡೀ ಕುಟುಂಬವೇ ಭ್ರಷ್ಟ ಕುಟುಂಬ. ಇದಲ್ಲದೆ, ಚಾಂದ್ ಒಬ್ಬ ನೈಜ ಕಾಂಗ್ರೆಸಿಗನಲ್ಲ. ಆತ ಚುನಾವಣೆಗಳ ವೇಳೆ ತನ್ನ ತಂದೆ ಭಜನ್‌ಲಾಲ್‌ರನ್ನು ಬೆಂಬಲಿಸುತ್ತಾರೆ" ಎಂದು ಆಪಾದಿಸಿದ್ದಾರೆ.

ಚಂದ್ರಮೋಹನ್ ಹಾಗೂ ಅನುರಾಧಾ ಬಾಲಿ ಇಸ್ಲಾಂ‌ಗೆ ಮತಾಂತರಗೊಂಡು ಚಾಂದ್ ಮೊಹಮ್ಮದ್ ಹಾಗೂ ಫಿಜಾ ಆಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ವಿವಾಹವಾಗಿದ್ದರು. ಆದರೆ ಈ ಮದುವೆ ಹೆಚ್ಚುದಿನ ಬಾಳದೆ ಕ್ಷಿಪ್ರವಾಗಿ ಮುರಿದು ಬಿದ್ದಿದ್ದು, ಚಂದ್ರಮೋಹನ್ ಲಂಡನ್‌ನಿಂದ ಫಿಜಾರಿಗೆ ಪೋನ್ ಮತ್ತು ಎಸ್ಸೆಂಸ್ ಮೂಲಕ ತಲಾಖ್ ಹೇಳಿದ್ದರು.

ವಕೀಲೆಯಾಗಿರುವ ಅನುರಾಧ, ಚಂದ್ರಮೋಹನ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದು, ಅತ್ಯಾಚಾರ, ಮಾನನಷ್ಟ, ವಂಚನೆ ಹಾಗೂ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿರುವುದಾಗಿ ಆಪಾದಿಸಿದ್ದಾರೆ.

ಚಂದ್ರ ಮೋಹನ್ ಕಳೆದ ಡಿಸೆಂಬರ್‌ನಲ್ಲಿ ತನ್ನ ಹೊಸಪತ್ನಿ, ಹೊಸ ಹೆಸರು, ಹೊಸ ಧರ್ಮದೊಂದಿಗೆ ಸುಮಾರು 40 ದಿನಗಳ ಕಾಲ ತಲೆಮರೆಸಿಕೊಂಡಿದ್ದು, ತನ್ನ ಉಪಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು.

ಅನುರಾಧಾ ಬಾಲಿ ಜತೆ ಎಲ್ಲಾ ಸಂಬಂಧಕ್ಕೆ ಎಳ್ಳುನೀರು
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರದೆಡೆಗೆ ಬಿಜೆಪಿಯ ಮೃದು ಧೋರಣೆ
26/11: ಪೊಲೀಸರು ಧರಿಸಿದ್ದು ಕಳಪೆ ಬುಲೆಟ್‌ಪ್ರೂಫ್ ಜಾಕೀಟುಗಳು?
ಸಂಗ್ಮಾ ಕ್ಷಮೆ: ಕಾಂಗ್ರೆಸ್ ಎನ್‌ಸಿಪಿ ವಿಲೀನವಾಗುತ್ತಾ?
ಮೋದಿ ವಿರುದ್ಧ ಎಸ್‌ಐಟಿ ತನಿಖೆ ತಡೆಗೆ ಕೋರ್ಟ್ ನಕಾರ
ಮಹಿಳಾಮಸೂದೆ ಪಾಸಾದರೆ ವಿಷಸೇವಿಸುವೆ: ಶರದ್
ನ್ಯಾಯಾಂಗದಲ್ಲೂ ಬ್ರೋಕರುಗಳು, ಕೇಸುಗಳು ಫಿಕ್ಸ್?