ಮಹಿಳಾ ಮೀಸಲಾತಿ ಮಸೂದೆಯು ನೂತನ ಲೋಕಸಭಾ ತಜ್ಞರ ತಂಡದಿಂದ ಸೂಕ್ಷ್ಮ ಪರಿಶೀಲನೆಗೆ ಹೆಚ್ಚಿನ ಸಮಯ ಬೇಕಾಗುತ್ತಿದ್ದರಿಂದ ಮುಂದಿನ ಬಜೆಟ್ ಅಧಿವೇಶನದಲ್ಲಿ ಪ್ರಸ್ತುತ ಮಸೂದೆಯನ್ನು ಮಂಡಿಸಲು ವಿಳಂಬವಾಗುವ ಸಾಧ್ಯತೆ ಇದೆ.
ಸದ್ಯ ಈ ಮಸೂದೆಯ ನಿಯಮ ಮತ್ತು ಕಾನೂನು ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿದ್ದು ಇನ್ನಷ್ಟು ವಿಷಯಗಳನ್ನು ಇದರಲ್ಲಿ ಸೇರಿಸಲು ಬಾಕಿ ಇರುವುದರಿಂದ ಮಹಿಳಾ ಮಸೂದೆ ಮಂಡನೆ ಮತ್ತಷ್ಟು ವಿಳಂಬವಾಗಲಿದೆ.
ರಾಜ್ಯಸಭೆಯಲ್ಲಿ ಮಂಡಿಸಲಾದ ಈ ಮಸೂದೆಯಲ್ಲಿ ಇನ್ನಷ್ಟು ಸಂಗತಿಗಳನ್ನು ಸೇರಿಸಲು ಆಯೋಗವೊಂದರ ರಚನೆಯಾಗಬೇಕಾಗಿದೆ. ಈ ಮೂಲಕ ಹೊಸ ಕಾನೂನು ಸೇರಿಸಿದ ನಂತರವೇ ಮಸೂದೆಯನ್ನು ಮಂಡಿಸಲಾಗುವುದು. ಪ್ರಸ್ತುತ ಮಸೂದೆಯನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿದ ನಂತರ ಆಯೋಗ ಸಂಸತ್‌ಗೆ ತಮ್ಮ ವರದಿ ಸಲ್ಲಿಸಬೇಕಾಗಿದೆ.
ಎರಡನೇ ಬಾರಿ ಅಧಿಕಾರದ ಗದ್ದುಗೆ ಹಿಡಿದಿರುವ ಯುಪಿಎ ಸರ್ಕಾರ ನೂರು ದಿನಗಳ ಅಧಿಕಾರವನ್ನು ಪೂರೈಸುವ ವೇಳೆಗೆ ಮಹಿಳಾ ಮೀಸಲಾತಿ ಮಸೂದೆ ಜಾರಿ ಕಾರ್ಯ ಪೂರ್ಣಗೊಳಿಸುವ ಭರವಸೆ ಹೊಂದಿದೆ. |