ಅತ್ಯಂತ ಶ್ರೀಮಂತ ಮಫತ್‌ಲಾಲ್ ಕಂಪೆನಿ ಗುಂಪಿನ ಮುಖ್ಯಸ್ಥೆ ಶೀತಲ್ ಮಫತ್‌ಲಾಲ್ ಅವರನ್ನು ಸೋಮವಾರ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
51ಲಕ್ಷ ರೂ. ಮೌಲ್ಯದ ಒಡವೆ ಹಾಗೂ ಒಂದು ಕೋಟಿ ರೂ.ನಗದನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಆರೋಪದಲ್ಲಿ ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸೆರೆ ಹಿಡಿದು, ಭಾರತೀಯ ಆದಾಯ ತೆರಿಗೆ ಕಾಯ್ದೆಯನ್ವಯ ದೂರು ದಾಖಲಿಸಿದ್ದರು.
ಬಂಧಿತ ಶೀತಲ್ ಮಫತ್‌ಲಾಲ್ ಅನ್ನು ಆದಾಯ ತೆರಿಗೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಜೂನ್ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಖಚಿತ ಮಾಹಿತಿ ಮೇರೆಗೆ ಪ್ರತಿಷ್ಠಿತ ವ್ಯಕ್ತಿಯಾಗಿರುವ ಮಫತ್‌ಲಾಲ್ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ತಪಾಸಣೆ ನಡೆಸಿದಾಗ, 51ಲಕ್ಷ ರೂ.ಒಡವೆ ಮತ್ತು ಒಂದು ಕೋಟಿ ರೂ.ನಗದು ಪತ್ತೆಯಾಗಿತ್ತು. |