ಒರಿಸ್ಸಾದ ನವೀನ್ ಪಟ್ನಾಯಕ್ ಸರ್ಕಾರವು ನಕ್ಸಲ್ ಸಮಸ್ಯೆಯ ನಿವಾರಣೆಗೆ ವಿಫಲವಾಗಿದೆ ಎಂದು ದೂರಿರುವ ವಿಪಕ್ಷ ಕಾಂಗ್ರೆಸ್, ನಕ್ಸಲ್ ಸಮಸ್ಯೆ ನಿವಾರಣೆಗೆ ಸೇನೆಯನ್ನು ಬಳಸುವುದರಲ್ಲಿ ತನ್ನ ವಿರೋಧವಿಲ್ಲ ಎಂದು ಹೇಳಿದೆ.
ಒರಿಸ್ಸಾ ವಿಧಾನಸಭೆಯ ವಿಪಕ್ಷ ನಾಯಕ ಭೂಪಿಂದರ್ ಸಿಂಗ್ ಅವರು, ಕೋರಾಪುಟ್ ಜಿಲ್ಲೆಯ ಪೊಲೀಸ್ ಠಾಣೆಗಳ ಮೇಲೆ ನಕ್ಸಲರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ರಾಜ್ಯ ಸರ್ಕಾರವು ಮಾವೋವಾದಿ ಸಮಸ್ಯೆಯನ್ನು ನಿಗ್ರಹಿಸುವಲ್ಲಿ ಸಂಪೂರ್ಣ ಸೋತಿದೆ. ರಾಜ್ಯ ಪೊಲೀಸರು ನಕ್ಸಲರನ್ನು ಹತ್ತಿಕ್ಕಲು ಅಸಮರ್ಥವಾಗಿರುವ ಕಾರಣ ಸೇನಾ ಮಧ್ಯಪ್ರವೇಶವನ್ನು ಕಾಂಗ್ರೆಸ್ ವಿರೋಧಿಸುವುದಿಲ್ಲ" ಎಂದು ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. |