ಹಿಂದುತ್ವ ಒಂದು ಧರ್ಮವಲ್ಲ, ಬದಲಿಗೆ ಅದೊಂದು ಜೀವನಕ್ರಮ ಎಂಬುದಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ಅವರು ಸೋಮವಾರ ರಾತ್ರಿ ನಾಗ್ಪುರದ ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ನಡೆದ ತಿಂಗಳ ಕಾಲದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದರು.
ಧಾರ್ಮಿಕ ಮತಾಂತರಗಳನ್ನು ಪ್ರಸ್ತಾಪಿಸಿದ ಅವರು, ಇತರ ಧರ್ಮಗಳನ್ನು ಗೌರವಿಸಬೇಕೇ ವಿನಹ ಇತರರ ನಂಬುಗೆಯನ್ನು ನಿಂದಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಭಯೋತ್ಪಾದನೆ ಮತ್ತು ಬಡತನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್ಎಸ್ಎಸ್ ಮುಖ್ಯಸ್ಥರು, ಸಮಾಜದಿಂದ ಈ ಎರಡು ಪಿಡುಗುಗಳನ್ನು ತೊಡೆದು ಹಾಕಲು ವ್ಯವಸ್ಥಿತ ಪ್ರಯತ್ನಗಳಿಗೆ ಕರೆ ನೀಡಿದರು.
ಅನೇಕತೆಯಲ್ಲಿ ಏಕತೆಯ ಭಾರತವು ತನ್ನದೇ ಆದ ಅನನ್ಯತೆಯನ್ನು ಹೊಂದಿರುವ ಕಾರಣ ಅದನ್ನು ಇತರ ರಾಷ್ಟ್ರಗಳಿಗೆ ಹೋಲಿಸುವಂತಿಲ್ಲ ಎಂದು ಅವರು ನುಡಿದರು. |