ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರವಾದ ಸಹಿಸಲಾಗದು, ಪಾಕ್ ಕ್ರಮಕೈಗೊಳ್ಳಲಿ: ಪಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರವಾದ ಸಹಿಸಲಾಗದು, ಪಾಕ್ ಕ್ರಮಕೈಗೊಳ್ಳಲಿ: ಪಿಎಂ
ಭಾರತದ ವಿರುದ್ಧ ಅಪರಾಧಗಳನ್ನು ಎಸಗುತ್ತಿರುವ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯವನ್ನು ಪಾಕಿಸ್ತಾನಿ ನಾಯಕತ್ವವು ತೋರಬೇಕು ಎಂದು ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್, ಭಯೋತ್ಪಾದನೆಯ ಕುರಿತು ಸಹನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ರಾಷ್ಟ್ರಪತಿಗಳ ವಂದನಾ ನಿರ್ಣಯ ಚರ್ಚೆಯ ಬಳಿಕ ಮಾತನಾಡಿದ ಅವರು ಸಂಪೂರ್ಣ ಪ್ರಕ್ಷುಬ್ಧತೆಯ ನೆರೆದೇಶವನ್ನು ನಾವು ಹೊಂದಿದ್ದೇವೆ. ಅಸ್ಥಿರ ನೆರೆಹೊರೆಯು ಭಾರತದ ಅಭಿವೃದ್ಧಿಯನ್ನು ನಿಧಾನವಾಗಿಸಿದೆ ಎಂದು ಸಿಂಗ್ ಕಟು ನುಡಿಗಳನ್ನಾಡಿದರು.

ಭಾರತದ ಹಿತಾಸಕ್ತಿಗೆ ಎದುರಾಗಿ ತನ್ನ ನೆಲವನ್ನು ಬಳಸುತ್ತಿರುವುದನ್ನು ತಡೆಯಲು ಇಸ್ಲಾಮಾಬಾದ್ ಬಲವಾದ ಮತ್ತು ಸ್ಥಿರವಾದ ಕ್ರಮವನ್ನು ಕೈಗೊಂಡು, ಈ ಹಿಂದೆ ಇಂತಹ ಕ್ರಮಗಳನ್ನು ಕೈಗೊಂಡಿರುವವರನ್ನು ಕಾನೂನಿನ ಕಟಕಟೆಗೆ ತರಬೇಕು ಎಂದು ನುಡಿದರು. ಇಂತಹ ಕ್ರಮವನ್ನು ಉಭಯ ರಾಷ್ಟ್ರಗಳ ಜನತೆ ಸ್ವಾಗತಿಸುತ್ತಾರೆ ಎಂದು ಅವರು ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಾ ನುಡಿದರು.

ಶಾಂತಿಯ ಮಾರ್ಗದತ್ತ ಸಾಗಲು ಪಾಕಿಸ್ತಾನಿ ನಾಯಕರಿಗೆ ಧೈರ್ಯ, ದೃಢಸಂಕಲ್ಪ ಹಾಗೂ ಮುತ್ಸದ್ದಿತನವಿದ್ದರೆ, ನಾವು ಅರ್ಧ ದಾರಿಯಲ್ಲಿ ಅವರನ್ನು ಭೇಟಿಯಾಗಲಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.

ಇದೇವೇಳೆ, ಶ್ರೀಲಂಕಾ ತಮಿಳರ ಸಮಸ್ಯೆಯನ್ನು ಅರಿತುಕೊಂಡು ಲಂಕಾ ಸರ್ಕಾರ ಅವರ ಆಶೋತ್ತರಗಳನ್ನು ಈಡೇರಿಸಬಹುದಾಗಿದೆ ಎಂಬ ಆಶಾಭಾವವನ್ನು ಅವರು ವ್ಯಕ್ತಪಡಿಸಿದರು. ನಿರಾಶ್ರಿತರ ಪುನರ್ವಸತಿಗಾಗಿ ಸಹಾಯ ನೀಡಲು ಭಾರತವು ಆಸಕ್ತಿ ವಹಿಸಿದೆ, ಇದಕ್ಕಾಗಿ 500 ಕೋಟಿ ರೂಪಾಯಿ ನೀಡಲಾಗಿದ್ದು ಅವಶ್ಯಕತೆ ಇದ್ದಲ್ಲಿ ಇನ್ನಷ್ಟು ಸಹಾಯ ಒದಗಿಸಲು ಸಿದ್ದವಾಗಿದ್ದು, ಇದು ಮನೆಮಠ ಕಳಕೊಂಡವರು ಮತ್ತೆ ತಮ್ಮ ಮೂಲಸ್ಥಾನಕ್ಕೆ ಹಿಂದಿರುಗಲು ಸಹಾಯ ಮಾಡಲಿದೆ ಎಂದು ಎಂಬುದಾಗಿ ಪ್ರಧಾನಿ ಬೆಟ್ಟು ಮಾಡಿದರು.

ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಜನಾಂಗೀಯ ದೌರ್ಜನ್ಯವನ್ನು ಖಂಡಿಸಿದ ಪ್ರಧಾನಿ, ತಾನು ಈ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಕೆವಿನ್ ರುಡ್ ಅವರೊಂದಿಗೆ ಮಾತನಾಡಿದ್ದಾಗಿ ತಿಳಿಸಿದರು. ಮಾಧ್ಯಗಳು ಈ ಕುರಿತು ಸಂಯಮ ತೋರಬೇಕು ಎಂದು ಕಿವಿಮಾತು ಹೇಳಿದರು.

ಎರಡನೇ ಅವಧಿಯು ಹೊಸ ಆರಂಭ ಎಂದು ನುಡಿದರು. ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಮತ್ತು ಉದ್ಯೋಗಕ್ಕೆ ವಿಶೇಷ ಒತ್ತು ನೀಡುವುದಾಗಿ ಮತ್ತು ಬಿಹಾರ ಹಾಗೂ ಬುಡಕಟ್ಟು ಪ್ರದೇಶಗಳು ಸರ್ಕಾದ ಆದ್ಯತೆಯಾಗಿ ಎಂದು ತಿಳಿಸದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಯಮವಿರಲಿ: ಭಾರತೀಯ ವಿದ್ಯಾರ್ಥಿಗಳಿಗೆ ಕೃಷ್ಣ ಮನವಿ
ಹಿಂದುತ್ವ ಧರ್ಮವಲ್ಲ, ಅದೊಂದು ಜೀವನ ಕ್ರಮ: ಮೋಹನ್ ಭಾಗ್ವತ್
ಮದ್ರಸಾಗಳ ಶಿಕ್ಷಣಕ್ರಮದ ಪುನಾರಚನೆ: ಸಿಬಾಲ್
ಎನ್‌ಡಿಎ ಪಾಕ್ ತುಷ್ಟಿಕರಣ ಮಾಡಿತ್ತು: ಕಾಂಗ್ರೆಸ್
ಒರಿಸ್ಸಾ: ನಕ್ಸಲ್ ದಮನಕ್ಕೆ ಸೇನಾಮಧ್ಯಪ್ರವೇಶ?
ಮಾಯಾಗೆ ಸುಪ್ರೀಂ ನೋಟಿಸ್