ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳ ಬಂಧಕ್ಕೀಡಾಗಿದ್ದ ಮಫತ್‌ಲಾಲ್ ಕಂಪೆನಿ ಗುಂಪಿನ ಮುಖ್ಯಸ್ಥೆ ಶೀತಲ್ ಮಫತ್‌ಲಾಲ್ ಅವರಿಗೆ ಇಲ್ಲಿನ ನ್ಯಾಯಾಲಯ ಒಂದು ಮಂಗಳವಾರ ಜಾಮೀನು ನೀಡಿದೆ. ಇವರನ್ನು ಸೀಮಾ ಸುಂಕಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.
51ಲಕ್ಷ ರೂ. ಮೌಲ್ಯದ ವಜ್ರಾಭರಣ ಹಾಗೂ ಒಂದು ಕೋಟಿ ರೂ.ನಗದನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಆರೋಪದಲ್ಲಿ ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ಸೆರೆ ಹಿಡಿದು, ಭಾರತೀಯ ಕಸ್ಟಂಸ್ ಕಾಯ್ದೆಯನ್ವಯ ದೂರು ದಾಖಲಿಸಿದ್ದರು.
ಇವರಿಗೆ ಐದು ಲಕ್ಷರೂಪಾಯಿ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಅವರು ದೇಶಬಿಟ್ಟು ತೆರಳದಂತೆ ಆದೇಶಿಸಲಾಗಿದೆ.
ಪ್ರತಿಷ್ಠಿತ ವ್ಯಕ್ತಿಯಾಗಿರುವ ಶೀತಲ್ ಮಫತ್‌ಲಾಲ್ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ್ದು 51ಲಕ್ಷ ರೂ.ಒಡವೆ ಮತ್ತು ಒಂದು ಕೋಟಿ ರೂ.ನಗದು ವಶಪಡಿಸಿಕೊಳ್ಳಲಾಗಿತ್ತು. |