ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಡ್ರಗ್ಸ್‌ಜತೆ ಸಿಕ್ಕಿ ಬಿದ್ದ ಅರ್ಜುನ ಪ್ರಶಸ್ತಿ ವಿಜೇತ ಪೊಲೀಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡ್ರಗ್ಸ್‌ಜತೆ ಸಿಕ್ಕಿ ಬಿದ್ದ ಅರ್ಜುನ ಪ್ರಶಸ್ತಿ ವಿಜೇತ ಪೊಲೀಸ್
ಮಾದಕ ದ್ರವ್ಯಗಳನ್ನು ಹೊಂದಿದ್ದ ಅರ್ಜುನ ಪ್ರಶಸ್ತಿ ವಿಜೇತ ಕುಸ್ತಿಪಟು ಒಬ್ಬನನ್ನು ಇತರ ಮೂವರೊಂದಿಗೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸೋಮವಾರ ಬಂಧಿಸಿದೆ. ಇವರಿಂದ 20ಕೋಟಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಜಗದೀಶ್ ಸಿಂಗ್ ಎಂಬ ಕುಸ್ತಿಪಟು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಅಮಾನತಿಗೀಡಾಗಿದ್ದಾರೆ. 1998ರಲ್ಲಿ ಆರ್ಜುನ ಪ್ರಶಸ್ತಿ ವಿಜೇತರಾಗಿದ್ದ ಸಿಂಗ್, 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಫರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಇತರ ಮೂವರಲ್ಲಿ ಹರ್ವಿದಂರ್ ಸಿಂಗ್(32) ಹಾಗೂ ಹರ್ಜಿಂದರ್ ಸಿಂಗ್ ರಾಮ್(20) ಪಂಜಾಬ್‌ನವರಾಗಿದ್ದರೆ, ವೀರ್ ಬಹಾದ್ದೂರ್ ಎಂಬಾತ ಮುಂಬೈನವನಾಗಿದ್ದಾನೆ.

ಖಚಿತ ಮಾಹಿತಿಯಾಧಾರದಲ್ಲಿ ಕಾರ್ಯಾಚರಣೆ ನಡೆಸಿರುವ ಮುಂಬೈ ಎನ್‌ಸಿಬಿ ಅಧಿಕಾರಿಗಳು ಗುರ್‌ಗಾಂವ್‌ನ ಒಬೇರಾಯ್ ಮಾಲ್‌ ಸಮೀಪ ಬಲೆ ಬೀಸಿದ್ದರು. ಈ ಮೂವರು ರಾತ್ರಿ ಸುಮಾರು 8.30ರ ವೇಳೆಗೆ ಬಂದಿದ್ದು ಅಲ್ಲೇ ಕಾದಿದ್ದ ಅಧಿಕಾರಿಗಳು ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡರು.

ಇವರ ಬ್ಯಾಗುಗಳನ್ನು ತಪಾಸಿಸಿದಾಗ ಸುಮಾರು 25 ಕೆಜಿ ಗಳಷ್ಟು ಮೆಟಂಫೆಟಮೈನ್ ಎಂಬ ಮಾದಕ ವಸ್ತು ಪತ್ತೆಯಾಗಿದೆ. ಇದನ್ನು ಹೆಚ್ಚಾಗಿ ರೇವ್ ಪಾರ್ಟಿಗಳನ್ನು ಬಳಸಲಾಗುತ್ತದೆ.

ಖಾಸಗೀ ವಾಹನದಲ್ಲಿ ನಗರಕ್ಕೆ ಬಂದಿರುವ ಅವರು ಹೋಟೇಲ್ ಮಾರೋಲ್‌ನಲ್ಲಿ ತಂಗಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ಜೂನ್ 12ರ ತನಕ ಪೊಲೀಸ್ ವಶಕ್ಕೆ ನೀಡಲಾಗಿದೆ.

ನೆಲಕಚ್ಚಿದ ಹೀರೋ
ಕುಸ್ತಿಪಟು ಜಗದೀಶ್ ಸಿಂಗ್ ಪಂಜಾಬಿ ಸಿನಿಮಾ ಒಂದರಲ್ಲೂ ನಟಿಸಿದ್ದರಂತೆ. ವಿಪರ್ಯಾಸವೆಂದರೆ, ಇದು ಕುಸ್ತಿಪಟು ಒಬ್ಬನಿಗೆ ಸಂಬಂಧಿಸಿದ ಕತೆಯಾಗಿದ್ದು, ಇದರಲ್ಲಿ ಕುಸ್ತಿಪಟು ನಾಯಕ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದು ಇದು ಆತನ ಭವಿಷ್ಯವನ್ನೇ ಧ್ವಂಸ ಮಾಡುತ್ತದೆ. ಸಿನಿಮಾ ಕಥೆಯೇ ನಿಜ ಜೀವನಕ್ಕೂ ಸ್ಫೂರ್ತಿ ಆಯ್ತಾ?
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾನು ಕಾಂಗ್ರೆಸ್‌ಗೆ ಫ್ರೀಲಾನ್ಸರ್ ಆಗಿದ್ದೆ: ಲಾಲೂ
ಪ್ರಲೋಭನೆಗೊಳಗಾಗದಿರಿ: ಆಡ್ವಾಣಿ ಕಿವಿಮಾತು
ಬಾನಂಗಳದಲ್ಲಿ ಅಪೂರ್ವ 'ಸೂರ್ಯಗ್ರಹಣ ಕೌತುಕ'
ರ‌್ಯಾಂಗಿಂಗ್‌ಗೆ ಎಂಸಿಎ ವಿದ್ಯಾರ್ಥಿ ಬಲಿ
ಪ್ರತಿಕೂಲ ಹವಾಮಾನ: 10 ಯಾತ್ರತ್ರಿಗಳ ಸಾವು
ಶೀತಲ್ ಮಫತ್‌ಲಾಲ್‌ಗೆ ಜಾಮೀನು