ಲೋಕಸಭಾ ಚುನಾವಣೆಯ ಫಲಿತಾಂಶವು ಜಾತಿರಾಜಕೀಯ ಮಾಡುವ ಮತ್ತು ಕೋಮುಭಾವನೆಗಳನ್ನು ಕೆರಳಿಸುವ ಪಕ್ಷಗಳನ್ನು ಜನತೆ ದೂರವಿಟ್ಟಿರುವುದನ್ನು ಸೂಚಿಸಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ.ಅವರು ಚುನಾವಣಾ ಫಲಿತಾಂಶಗಳ ಬಳಿಕ ತನ್ನ ಸ್ವಕ್ಷೇತ್ರ ರಾಯ್‌ಬರೇಲಿಗೆ ನೀಡಿದ ಪ್ರಥಮ ಭೇಟಿ ವೇಳೆ ಫಿರೋಜ್ ಗಾಂಧಿ ಪದವಿ ಕಾಲೇಜಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಕಾಂಗ್ರೆಸ್ ಗೆಲವು ಜನತೆ ಅಭಿವೃದ್ಧಿಗೆ ಮತನೀಡಿರುವುದರ ಸಂಕೇತ ಎಂದು ಅವರು ಹೇಳಿದರು. ಅಲ್ಲದೆ ಕಾಂಗ್ರೆಸ್ ಗೆಲುವನ್ನು 'ಪ್ರಮುಖ ಮತ್ತು ಐತಿಹಾಸಿಕ' ಎಂದು ಬಣ್ಣಿಸಿದರು. ಇದೇವೇಳೆ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷವನ್ನು ಬಲಪಡಿಸುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.ಕ್ಷೇತ್ರದಲ್ಲಿ ಹೆಚ್ಚುಸಮಯ ವ್ಯಯಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಸೋನಿಯಾ ಮುಂದಿನ ಬಾರಿ ಭೇಟಿನೀಡಿದಾಗ ಕ್ಷೇತ್ರದಲ್ಲಿ ಎರಡ್ಮೂರು ದಿನ ಇರುವುದಾಗಿ ಅವರು ಕಾರ್ಯಕರ್ತರಿಗೆ ಭರವಸೆ ನೀಡಿದರು. |