ಮುಸ್ಲಿಮರಿಗೆ ಮೀಸಲಾತಿ ಕುರಿತು ಚರ್ಚೆ ನಡೆಸುವುದು ನಿರರ್ಥಕ ಎಂದು ಹೇಳಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ಇದರ ಬದಲಿಗೆ ಸಮುದಾಯದ ಉನ್ನತಿಗಾಗಿ ದೃಢವಾದ ಕ್ರಮಕೈಗೊಳ್ಳುವುದು ಉತ್ತಮ ಎಂಬುದಾಗಿ ಒಲವು ವ್ಯಕ್ತಪಡಿಸಿದ್ದಾರೆ.
ಸಾಂವಿಧಾನಿಕ ತಿದ್ದುಪಡಿಯಿಂದ ಮುಂದೊಂದು ದಿನ ಮೀಸಲಾತಿಯು ಲಭಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು ತಾನು ಮೀಸಲಾತಿಯ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಪಸಂಖ್ಯಾತರ ಉನ್ನತಿಯ ಕಾರ್ಯಗಳ ಜಾರಿಯನ್ನು ಬಹುಸಂಖ್ಯಾತರು ಸ್ವೀಕರಿಸುವ ಮತ್ತು ಬೆಂಬಲಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವುದೊಂದೇ ಅವರ ಕಲ್ಯಾಣಕ್ಕಿರುವ ದಾರಿಯಲ್ಲ. ದೃಢವಾದ ಕಾರ್ಯಕೈಗೊಳ್ಳುವು ಇತರ ಹಲವು ದಾರಿಗಳನ್ನು ಹೊಂದಿದೆ ಎಂದು ಅವರು ನುಡಿದರು.
ಯುಪಿಎ ಸರ್ಕಾರ ಕೈಗೊಂಡಿರುವ ಹಲವಾರು ಕಾರ್ಯಕ್ರಮಗಳು ಫಲಗಳಿಸಬೇಕಿದ್ದರೆ, ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಸಚಿವರು ನುಡಿದರು. |