ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೃಜನಾತ್ಮಕವಾಗಿ ಯೋಚಿಸಿ: ಅಧಿಕಾರಿಗಳಿಗೆ ಪಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೃಜನಾತ್ಮಕವಾಗಿ ಯೋಚಿಸಿ: ಅಧಿಕಾರಿಗಳಿಗೆ ಪಿಎಂ
ಸರ್ಕಾರದ 100 ದಿನಗಳ ಕ್ರಿಯಾಯೋಜನೆಯ ಕುರಿತು ಸೃಜನಶೀಲವಾಗಿ ಚಿಂತಿಸಿ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ಕಚೇರಿಯ ಅಧಿಕಾರಿಗಳಿಗೆ ಹೇಳಿದ್ದಾರೆ. ತನ್ನ ಮಂತ್ರಿಮಂಡಲದ ಸಹೋದ್ಯೋಗಿಗಳಿಗೆ ಕ್ರಿಯಾ ಯೋಜನೆಯ ಕುರಿತು ಪತ್ರ ಬರೆದಿದ್ದ ಸಿಂಗ್, ಇದೀಗ ಅಧಿಕಾರಿಗಳಿಗೆ ಸೃಜನಾತ್ಮಕವಾಗಿ ಆಲೋಚಿಸುವಂತೆ ಸಲಹೆ ಮಾಡಿದ್ದಾರೆ.

ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಲಹೆ ನೀಡಿರುವ ಅವರು ಸಮಾನತೆ, ಆವಿಷ್ಕಾರ ಮತ್ತು ಸಾರ್ವಜನಿಕ ಉತ್ತರದಾಯಿತ್ವದ ಅಂತರ್‌ಪ್ರೇರಣೆಯ ಆಧಾರದಲ್ಲಿ ಕೆಲಸಮಾಡಬೇಕು ಎಂದು ಸಲಹೆ ಮಾಡಿದ್ದಾರೆ. ಪರಿವೀಕ್ಷಣೆ ಮತ್ತು ಮೌಲ್ಯಮಾಪನ ವ್ಯವಸ್ಥೆಗಳ ಕುರಿತು ಪುನರ್ ಚಿಂತನೆ ಮಾಡಬೇಕೆಂದು ಹೇಳಿರುವ ಸಿಂಗ್, ಸರ್ಕಾರಿ ಕಾರ್ಯಸೂಚಿಯ ಕುರಿತು ಸೃಜನಶೀಲವಾಗಿ ಆಲೋಚಿಸುವ ಅವಶ್ಯಕತೆ ಇದೆ ಎಂದು ಸೂಚಿಸಿದ್ದಾರೆ.

ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳ ಒಳಗಾಗಿ ಪಟ್ಟಿಮಾಡಿರುವ ಅನುಸರಣಾ ಕಾರ್ಯಗಳ ಉಪಕ್ರಮವಾಗಬೇಕು ಮತ್ತು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಾಕಿಇರುವ ನಿಯಂತ್ರಣ ಸಂಸ್ಥೆಗಳ ಸುಧಾರಣೆ ಕುರಿತು ಚರ್ಚಿಸಲಾಗಿದೆ ಎಂದು ಪ್ರಧಾನಿ ಅವರು ಮಾಧ್ಯಮ ಸಲಹೆಗಾರ ದೀಪಕ್ ಸಂಧು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಲು ಕೇಂದ್ರಸಚಿವರಿಗೆ ಪತ್ರಮುಖೇನ ತಿಳಿಸಿರುವ ಸಿಂಗ್, ಅವರು ಕಾರ್ಯಕ್ರಮಗಳ ಜಾರಿಯಲ್ಲಿನ ಸೋರಿಕೆಯನ್ನು ತಡೆಯಲು ಗಂಭೀರ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಲ್ಪಸಂಖ್ಯಾತರಿಗೆ ಮೀಸಲಾತಿ ನಿರರ್ಥಕ: ಖುರ್ಷಿದ್
ಚಿದು ಕಾಶ್ಮೀರ ಭೇಟಿ, ಭದ್ರತಾ ಪರಿಶೀಲನೆ
ಕೋಮುವಾದಿಗಳಿಗೆ ಜನತೆ ಉತ್ತರಿಸಿದ್ದಾರೆ: ಸೋನಿಯಾ
ಆಜೀವ ರೈಲುಪ್ರಯಾಣಕ್ಕೆ ಲಾಲೂಗೆ ಉಚಿತ ಪಾಸು
ಕಾನ್ಪುರ: ಕಾಲೇಜಲ್ಲಿ ಜೀನ್ಸ್, ಸ್ಲೀವ್‌ಲೆಸ್ ಧರಿಸುವಂತಿಲ್ಲ!
ನರಹಂತಕ ಕಸಬ್‌ಗೆ ಸರಿಯಾಗಿ ವರ್ತಿಸಲು ತಾಕೀತು