ಮುಂಬೈ ಉಗ್ರರ ದಾಳಿ ಸಮಯದಲ್ಲಿ ಛತ್ರಪತಿ ಶಿವಾಜಿ ನಿಲ್ದಾಣ ಬಳಿಯಲ್ಲಿ ಹಲವರನ್ನು ಕೊಂದು ಹಾಕಿದ ಇಬ್ಬರು ಉಗ್ರರರಲ್ಲಿ ಒಬ್ಬ ಅಜ್ಮಲ್ ಕಸಬ್ ಎಂದು ನಾಲ್ಕು ಮಂದಿ ಸಾಕ್ಷಿಗಳು ಗುರುತಿಸಿದ್ದಾರೆ.ಅಲ್ಲದೆ, ಸಾಕ್ಷಿಗಳಲ್ಲಿದ್ದ ಮಹಿಳೆಯೊಬ್ಬಾಕೆ, ಅಂದು ದಾಳಿಯ ಸಂದರ್ಭ ನನ್ನ ಮಗಳ ಮೇಲೆ ಗುಂಡು ಹಾರಿಸಿದ್ದು ಈತನೇ. ಈತನಿಂದಾಗಿಯೇ ನಾನು ನ್ನನ ಆರು ವರ್ಷದ ಮಗಳನ್ನು ಕಳೆದುಕೊಂಡೆ ಎಂದು ರೋದಿಸಿದ್ದಾಳೆ.ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಸಾರ್ವಜನಿಕ ದೂರನ್ನು ತೆರೆದಿಟ್ಟುದಕ್ಕೆ ಕಸಬ್ ಪರ ವಕೀಲ ಅಬ್ಬಾಸ್ ಕಝ್ಮಿ ಈ ಅಭ್ಯಾಸ ಒಳ್ಳೆಯ ಲಕ್ಷಣವಲ್ಲ ಎಂದು ದೂರಿದ್ದಾರೆ. ನ್ಯಾಯಮೂರ್ತಿ ಎಂ.ಎಲ್ ತಹಾಲಿಯಾನಿ ಅವರು 26/11 ದಾಳಿಯ ತನಿಖಾ ಅಧಿಕಾರಿಯಾಗಿದ್ದು, ಕಸಬ್ ದೂರಿಗೆ ಪ್ರತಿಕ್ರಿಯೆ ದಾಖಲಿಸಲಿದ್ದಾರೆ. ನ್ಯಾಯಾಲಯದಲ್ಲಿ ಕಲಾಪ ನಡೆಯುವ ಮೊದಲು ಎದ್ದು ನಿಂತ ಕಸಬ್, ನನ್ನನ್ನು ಕೋರ್ಟ್‌ಗೆ ಕರೆತರುವ ಸಂದರ್ಭ ಸಾಕ್ಷಿಗಳನ್ನೂ ಕೋರ್ಟ್‌ಗೆ ಕರೆತರಲಾಯಿತು. ಆಗ ನನ್ನನ್ನು ಆ ಸಾಕ್ಷಿಗಳ ಮುಂದೆ ಸ್ವಲ್ಪ ಹೊತ್ತು ನಿಲ್ಲಿಸಲಾಯಿತು ಎಂದರು. ಹಾಗಾದರೆ ಬೆಳಿಗ್ಗೆ ನಿಮ್ಮನ್ನು ಕೋರ್ಟ್‌ಗೆ ಕರೆತರಲಾಗಿಲ್ಲವೇ ಎಂಬ ಜಡ್ಜ್ ಪ್ರಶ್ನೆಗೆ ಉತ್ತರಿಸಿದ ಕಸಬ್, ನನ್ನನ್ನು ಕರೆತರಲಾಗಿತ್ತು. ಆದರೆ ಅರ್ಧದಲ್ಲೇ ನಿಲ್ಲಿಸಲಾಯಿತು ಎಂದರು.ಎರಡನೇ ದಿನ ಕೋರ್ಟ್‌ನಲ್ಲಿ ಸಾಕ್ಷಿಗಳು ಭಾವುಕವಾಗಿ ಮುಂಬೈ ದಾಳಿಯ ಸಮಯದಲ್ಲಿ ತಾವು ಕಂಡ ವಿಷಯವನ್ನು ಅರುಹಿದರು. ಸಾಕ್ಷಿಗಳಲ್ಲಿ ಒಬ್ಬ ಮಹಿಳೆ ಕಸಬ್‌ನನ್ನು ತೋರಿಸಿ, ಈತನೇ ಅಂದು ನಿಷ್ಕರುಣೆಯಿಂದ ಜನರನ್ನು ಕೊಲ್ಲುತ್ತಿದ್ದ. ಈಗ ನನ್ನ ಮೇಲೂ ಗುಂಡು ಹಾರಿಸಿದ್ದು, ಅದು ನನ್ನ ಕಾಲಿಗೆ ಬಿತ್ತು. ಆದರೆ ನನ್ನ ಜತೆ ಇದ್ದ ನನ್ನ ಆರು ವರ್ಷದ ಮಗಳಿಗೂ ಗುಂಡು ತಗುಲಿತ್ತು. ಮಗಳು ಮಾತ್ರ ಸತ್ತು ಹೋದಳು ಎಂದು ರೋದಿಸಿದಳು.ಆದರೆ, ಆಕೆ ರೋದನಕ್ಕೆ ಕಸಬ್ ಮಾತ್ರ ಯಾವುದೇ ಪ್ರತಿಕ್ರಿಯೆ ತೋರಿಸಲಿಲ್ಲ. ಕಸಬ್ ಅಂದು ಜನರನ್ನು ಕೊಂದದ್ದು ಎಂದು ಆಕೆ ಕಸಬ್ ಕಡೆಗೆ ಕೈತೋರಿಸಿ ಹೇಳುವಾಗಲೂ ಏನೂ ಆಗದವರಂತೆ ಕಸಬ್ ತಣ್ಣಗಿದ್ದರು ಎಂದು ವರದಿಯಾಗಿದೆ. |