ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೊಸ ಹಾಕರ್ 900 ಎಕ್ಸ್‌ಪಿ ಎಂಬ ವಿಮಾನ ಖರೀದಿಸಿದ್ದಾರೆ. ಈಗಾಗಲೇ ಅದು ಐಜಿಐ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ತಂಗಿದ್ದು, ಉತ್ತರ ಪ್ರದೇಶ ಸರ್ಕಾರಕ್ಕೆ ಮುಂದಿನ ವಾರದಲ್ಲಿ ತಲುಪಲಿದೆ.ಅಮೆರಿಕದ ಮಧ್ಯಮಗಾತ್ರದ ಬ್ಯುಸಿನೆಸ್ ಜೆಟ್ ವಿಮಾನಗಳ ದೈತ್ಯ ಸಂಸ್ಥೆ ಹಾಕರ್ ಬೀಚ್‌ಕ್ರಾಫ್ಟ್ ತಯಾರಿದ ಎರಡನೇ ಅತಿ ಹೆಚ್ಚು ಬೆಲೆಯ ವಿಮಾನ ಇದಾಗಿದೆ. ಇದರ ಬೆಲೆ 15.5 ಮಿಲಿಯನ್ ಡಾಲರ್ ಅರ್ಥಾತ್ ಸುಮಾರು 76 ಕೋಟಿ ರೂಪಾಯಿಗಳು.ಈ ವಿಮಾನ ಹಾಕರ್ 4000 ಮಾದರಿಯದ್ದಾಗಿದೆ. ಇದು 5,420 ಕಿ.ಮೀ ದೂರವನ್ನು ಯಾವುದೇ ನಿಲುಗಡೆಯಿಲ್ಲದೆ ಕೈರೋ, ಮಾಸ್ಕೋ, ಶಾಂಘೈ, ಹಾಂಗ್‌ಕಾಂಗ್‌ಗಳನ್ನು ದಾಟಿ ಕ್ರಮಿಸಬಲ್ಲುದು. ಹಾಕರ್ 4000 ಮಾದರಿಯಲ್ಲಿ 6,075ಕಿ.ಮೀ ದೂರವನ್ನು ನಿಲುಗಡೆಯೇ ಇಲ್ಲದೆ ಕ್ರಮಿಸುವ ವಿಮಾನವನ್ನೂ ಈ ಸಂಸ್ಥೆ ತಯಾರಿಸಿದೆ. ಈ ವಿಮಾನದ ಬೆಲೆ 110 ಕೋಟಿ (22.5 ಮಿ.ಡಾ) ರೂಪಾಯಿಗಳಾಗಿದೆ. ಈಗ ಈ ವಿಮಾನ ಸಾರ್ಕ್ ವಿಭಾಗಕ್ಕೆ ಒಳಪಡುವ ಇಂಟರ್ ಗ್ಲೋಬ್ ಏವಿಯೇಶನ್‌ನ ನಿಲ್ದಾಣದಲ್ಲಿ ನಿಂತಿದೆ. ಈ ವಿಮಾವನ್ನು ಖರೀದಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರವೂ ಉಳಿದ ರಾಜ್ಯಗಳಂತೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ತನ್ನ ತಲೆತೂರಿಸಿಕೊಂಡಿದೆ. |