ರುದ್ರಾಕ್ಷ ಫೌಂಡೇಶನ್ ಸೊಸೈಟಿಯ ಅಧ್ಯಕ್ಷ ತಾನೆಂದು ಹೇಳಿಕೊಳ್ಳುವ ಎಂ.ಲಿಮಾಯೆ ಎಂಬವರು ಇದೀಗ ತಿರುಪತಿಯ ತಿಮ್ಮಪ್ಪನಿಗೆ ಸೇರಿದ ಮಾಣಿಕ್ಯ ಕಲ್ಲನ್ನು ಹರಾಜಿಗೆ ಇಡುವುದಾಗಿ ಸಾರಿದ್ದಾರೆ. 1,275 ಕ್ಯಾರೆಟ್‍ನ ಆ ಮಾಣಿಕ್ಯ ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳು ಬೆಲೆಬಾಳುತ್ತದೆ ಎಂಬುದು ಲಿಮಾಯೆ ಲೆಕ್ಕಾಚಾರ. ಜತೆಗೆ, ಹರಾಜಿನಿಂದ ಬರುವ ಅಷ್ಟೂ ಹಣವನ್ನು ಬಡವರ ಸೇವೆಗೆ ಮುಡಿಪಾಗಿಡುತ್ತೇನೆ ಎಂದೂ ಲಿಮಾಯೆ ಹೇಳಿದ್ದಾರೆ!ಆದರೆ, ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಮಾತ್ರ ಲಿಮಾಯೆಯ ಅಷ್ಟೂ ವಿವರಗಳನ್ನೂ ಸಂಪೂರ್ಣ ತಳ್ಳಿಹಾಕಿರುವ ಜತೆಗೆ, ಆ ಮಾಣಿಕ್ಯ ತಿಮ್ಮಪ್ಪನಿಗೆ ಸೇರಿದುದೇ ಅಲ್ಲ ಎಂದು ಹೇಳಿದೆ. ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ರಮಣಾಚಾರಿ ಹೇಳುವಂತೆ, ಟಿಟಿಡಿಗೂ ಮಾಣಿಕ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇಂತಹ ಯಾವುದೇ ಮಾಣಿಕ್ಯ ಟಿಟಿಡಿಯ ಬಳಿ ಹಿಂದೆ ಇರಲೇ ಇಲ್ಲ. 1998ರಲ್ಲಿ ಒಮ್ಮೆ ಟಿಟಿಡಿಗೆ ಒಂದು ದೂರವಾಣಿ ಕರೆ ಬಂದಿತ್ತು. ಆಗ ಕರೆ ಮಾಡಿದವರು ಮಾಣಿಕ್ಯವನ್ನು ತೆಗೆದುಕೊಂಡು ಹೋಗಲು ಟಿಟಿಡಿ ಅಧಿಕಾರಿಗಳು ಅಲ್ಲಿಗೆ ಹೋಗಬೇಕು ಎಂದಿದ್ದರು. ಆದರೆ ಟಿಟಿಡಿಯ ಸಂಪ್ರದಾಯದಲ್ಲಿ ತಾವೇ ಹೋಗಿ ತೆಗೆದುಕೊಂಡು ಬರುವ ಕ್ರಮ ಇಲ್ಲ. ಭಕ್ತರು ತಾವಾಗಿ ಬಂದು ತಿಮ್ಮಪ್ಪನಿಗೆ ಅರ್ಪಿಸಿದರೆ ತೆಗೆದುಕೊಳ್ಳುತ್ತೇವೆ. ಹಾಗಾಗಿ ಯಾರೂ ಮಾಣಿಕ್ಯ ತೆಗೆದುಕೊಳ್ಳಲು ಹೋಗುವ ಆಸಕ್ತಿ ತೋರಿರಲಿಲ್ಲ. ಹಾಗಾಗಿ ಆ ಮಾಣಿಕ್ಯಕ್ಕೂ ಟಿಟಿಡಿಗೂ ಯಾವುದೇ ಸಂಬಂಧ ಇರಲೇ ಇಲ್ಲ ಎಂದಿದ್ದಾರೆ.ಗಣಿ ರೆಡ್ಡಿಗಳಾದ ಬಿಜೆಪಿಯ ಜನಾರ್ಧನ ರೆಡ್ಡಿ ಇತ್ತೀಚೆಗೆ ತಿಮ್ಮಪ್ಪನಿಗೆ 45 ಕೋಟಿ ರೂಪಾಯಿಗಳ ಭಾರೀ ಕಿರೀಟ ನೀಡಲಾಗಿತ್ತು. ಆಗ ಅವರು ಪತ್ರಿಕಾ ಪ್ರತಿನಿಧಿಗಳನ್ನೂ ಕರೆದಿದ್ದರು. ಈಗ 1,275 ಕ್ಯಾರೆಟ್ ಮಾಣಿಕ್ಯವನ್ನು ಹೊಂದಿದ ವ್ಯಕ್ತಿ ಹೀಗೆ ಹೇಳುತ್ತಿದ್ದಾರೆ ಎಂದು ರಮಣಾಚಾರಿ ಹೇಳಿದರು. |