ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂ ಸಮೀಪವಿರುವ ಗ್ರಾಮವೊಂದರಲ್ಲಿ ಹಲವು ಸಮಯದಿಂದ 'ಕರುಪ್ಪಸ್ವಾಮಿ' ಎಂಬ ಹೆಸರಿನಲ್ಲಿ ಆರಾಧನೆಗೊಳ್ಳುತ್ತಿದ್ದ ಪ್ರತಿಮೆಯೊಂದು ಇದೀಗ ಮಹಾವೀರ ಪ್ರತಿಮೆ ಎಂಬುದು ದೃಢಪಟ್ಟಿದೆ!
ಪ್ರಾಚ್ಯವಸ್ತು ಸಂಶೋಧನೆಯಲ್ಲಿ ನಿರತವಾಗಿರುವ ದೆಹಲಿ ನೆಹರೂ ಟ್ರಸ್ಟ್ ಅಧಿಕಾರಿಗಳು ಈ ಪ್ರದೇಶಕ್ಕೆ ಆಗಮಿಸಿ, ಇದು ಪದ್ಮಾಸನ ಸ್ಥಿತಿಯಲ್ಲಿರುವ ಜೈನ ತೀರ್ಥಂಕರ ಮಹಾವೀರನ ಪ್ರತಿಮೆ ಎಂದು ಖಚಿತಪಡಿಸಿದ್ದಾರೆ. ಪ್ರತಿಮೆಯು ಮೂರು ಅಡಿ ಎತ್ತರ ಹಾಗೂ 2.25 ಅಡಿ ಅಗಲವಿದೆ.
ಈ ಪ್ರತಿಮೆಯು ಚೋಳರ ಕಾಲದ್ದಾಗಿದ್ದು, ಅಂದು ದೇಶದ ಕೆಲವು ಭಾಗಗಳಲ್ಲಿ ಜೈನ ಧರ್ಮ ಪ್ರಚಲಿತದಲ್ಲಿತ್ತು. ಆದರೆ, ಈ ಪ್ರತಿಮೆಯನ್ನು ಸ್ಥಳೀಯರು ಕರುಪ್ಪಸ್ವಾಮಿ ದೇವರು ಎಂದೇ ಪೂಜೆ, ಅಭಿಷೇಕ, ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕರುಪ್ಪಸ್ವಾಮಿ ಎಂಬುದು ತಮಿಳುನಾಡಿನ ಒಂದು ಕುಲದೇವರು. |