ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಕೆಟ್ ಲಾಂಚರ್‌ಗಳನ್ನು ಬಳಸಿ ಎಲ್ಲರನ್ನೂ ಚಕಿತಗೊಳಿಸಿದ್ದ ನಕ್ಸಲೀಯರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ತಯಾರಿಕೆಯ ನಾಲ್ಕು ಘಟಕಗಳನ್ನು ಈಗಾಗಲೇ ಸ್ಥಾಪಿಸಿದ್ದಾರೆಂದು ಕೇಂದ್ರ ಭದ್ರತಾ ಸಂಸ್ಥೆಗಳು ಮಾಹಿತಿ ನೀಡಿವೆ
ಭದ್ರತಾ ಪಡೆಗಳ ಮೇಲೆ ಸಾಮಾನ್ಯವಾಗಿ ಕೈಯಿಂದ ಸ್ಫೋಟಿಸುವ ಸುಧಾರಿತ ಸ್ಫೋಟಕ ಉಪಕರಣ ಬಳಸುತ್ತಿದ್ದ ನಕ್ಸಲರು ಈಗ ನಿಧಾನವಾಗಿ ದೂರನಿಯಂತ್ರಕ ಸುಧಾರಿತ ಸ್ಫೋಟಕ ಉಪಕರಣ ಬಳಸುತ್ತಿದ್ದು, ಕೇವಲ ಗುಂಡಿ ಅದುಮುವ ಮೂಲಕ ದೂರದಿಂದಲೂ ಅದನ್ನು ಸಕ್ರಿಯಗೊಳಿಸಬಹುದು.
ಸ್ಫೋಟಕಗಳ ಸುಧಾರಣೆ ಜತೆಗೆ ಸಾಮಾನ್ಯ ಪಡೆಗಳ ಮಾದರಿಯಲ್ಲೇ ನಕ್ಸಲರಿಗೆ ತೀವ್ರ ತರಬೇತಿ ಬೆಂಬಲವನ್ನೂ ನೀಡಲಾಗುತ್ತಿದೆಯೆಂದು ಮೂಲಗಳು ಹೇಳಿವೆ. ಜಾರ್ಖಂಡ್ ಮತ್ತು ಚತ್ತೀಸ್‌ಗಢದ ದಟ್ಟ ಕಾಡುಗಳಲ್ಲಿ ಮತ್ತು ಪರ್ವತಗಳಲ್ಲಿ ಮಾವೋವಾದಿಗಳು ಎರಡು ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಸ್ಥಾಪಿಸಿದ್ದಾರೆಂದು ಕೇಂದ್ರ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸ್ ಮೂಲಗಳು ಹೇಳಿವೆ.
ಬಿಹಾರದಲ್ಲಿ ಈ ಮುಂಚೆ ಇನ್ನೊಂದು ಕಾರ್ಖಾನೆ ಅಸ್ತಿತ್ವದಲ್ಲಿದ್ದರೂ ಅದನ್ನು ನಕ್ಸಲೀಯರು ನೆಲಸಮಗೊಳಿಸಿದ್ದರು. ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ತಂಡವು ಜಾರ್ಖಂಡ್‌ನಲ್ಲಿ ಸಣ್ಣ ಬಾಂಬ್ ಮತ್ತು ಮೋರ್ಟಾರ್ ಶೆಲ್ ತಯಾರಿಸುವ ಕಾರ್ಖಾನೆಯೊಂದನ್ನು ಪತ್ತೆಹಚ್ಚಿತ್ತು. |