ಕಳಂಕಿತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸದ ಪದ್ಮಸಿನ್ಹ್ ಪಾಟೀಲ್ ಅವರ ಬಂಧನದ ಅವಧಿಯನ್ನು ಇಲ್ಲಿನ ಕೋರ್ಟ್ ಜೂನ್ 20ವರೆಗೆ ವಿಸ್ತರಿಸಿದೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಪವನ್‌ರಾಜೆ ನಿಂಬಾಳ್ಕರ್ ಹತ್ಯೆಯಲ್ಲಿ ಪಾಟೀಲ್ ಭಾಗಿಯಾದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ನವಿಮುಂಬೈನ ಪನ್ವೇಲ್ ಕೋರ್ಟ್ ಇನ್ನೂ ಇಬ್ಬರು ಆರೋಪಿಗಳಾದ ಮೋಹನ್ ಶುಕ್ಲಾ ಮತ್ತು ಸತೀಶ್ ಮಂಡಾಡೆ ಅವರನ್ನು ಜೂ.26ರವರೆಗೆ ನ್ಯಾಯಾಂಗ ಕಸ್ಟಡಿಗೆ ತಳ್ಳಿದೆ.
ಏತನ್ಮಧ್ಯೆ, ಎನ್‌ಸಿಪಿ ಮುಖಂಡ ಮಂಪರು ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾರೆ. ಸಿಬಿಐ ತಮ್ಮ ಮೇಲೆ ತಾವು ಭಾಗಿಯಾಗಿರದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದೆಯೆಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಮುನ್ನ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸಂಬಂಧಪಟ್ಟಂತೆ ಅವರಿಗೆ ಮಂಪರು ಮತ್ತಿತರ ಇತರೆ ಪರೀಕ್ಷೆ ನಡೆಸಲುಸಿಬಿಐ ನಿರ್ಧರಿಸಿತ್ತು. ಕೆಲವು ವರದಿಗಳ ಪ್ರಕಾರ, ಸಂಸದರು ತನಿಖೆದಾರರಿಗೆ ಸಹಕರಿಸುತ್ತಿಲ್ಲವೆಂದು ಹೇಳಲಾಗಿದೆ.
ನಿಂಬಾಳ್ಕರ್ ಅವರನ್ನು ಅವರ ಸೋದರ ಸಂಬಂಧಿ ಪದ್ಮಸಿನ್ಹ ಜತೆ ಸಹಕಾರಿ ಸಕ್ಕರೆ ಸೊಸೈಟಿ ನಿರ್ವಹಣೆ ಕುರಿತ ಭಿನ್ನಾಭಿಪ್ರಾಯ ಉದ್ಭವಿಸಿದ ಬಳಿಕ ಪದ್ಮಸಿನ್ಹ ಅವರ ಬಾಡಿಗೆ ಬಂಟರು ನಿಂಬಾಳ್ಕರ್ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಪದ್ಮಸಿನ್ಹನನ್ನು ಬಯಲಿಗೆಳೆಯಲು ನಿಂಬಾಳ್ಕರ್ ಜತೆಗೂಡಿದ್ದ ಅಣ್ಣಾ ಹಜಾರೆ ಹತ್ಯೆಗೆ ಕೂಡ ಪದ್ಮಸಿನ್ಙ ಯೋಜಿಸಿದ್ದರೆಂದು ಆರೋಪಿಸಲಾಗಿದೆ. |