ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವ ಬಿಜೆಪಿಯ ಪರಿಸ್ಥಿತಿ ಜ್ವಾಲಾಮುಖಿಯಂತಾಗಿದೆ ಎಂಬುದಾಗಿ ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.ತನ್ನ ಲೋಕಸಭಾ ಕ್ಷೇತ್ರ ವಿಧಿಶಾಗೆ ನಾಲ್ಕುದಿನಗಳ ಭೇಟಿಗೆ ಆಗಮಿಸಿರುವ ಅವರು ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಜ್ವಾಲಾಮುಖಿ ಇದ್ದಾಗ ಸಣ್ಣಕಿಡಿಯೂ ಅದನ್ನು ಸ್ಫೋಟಗೊಳಿಸುತ್ತದೆ ಎಂದಷ್ಟೆ ಹೇಳಿದ ಅವರು ಪಕ್ಷದ ಕುರಿತು ಮತ್ತೇನನ್ನೂ ಹೇಳಲು ನಿರಾಕರಿಸಿದರು.ಪಕ್ಷದ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅವರು ಎನ್ಡಿಎ ಗೆದ್ದಿದ್ದರೆ ಪ್ರಧಾನಿಯಾಗುತ್ತಿದ್ದ ಕಾರಣ, ಲೋಕಸಭೆಯಲ್ಲಿ ವಿಪಕ್ಷನಾಯಕನಾಗಿ ಮುಂದುವರಿಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು. ಮಧ್ಯಪ್ರದೇಶ, ಚತ್ತೀಸ್ಗಢ, ಜಾರ್ಖಂಡ್ಗಳಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿಯು ಮುಗಿದ ಅಧ್ಯಾಯ ಎಂದು ಹೇಳಿದ ಸುಷ್ಮಾ ತಾನೀಗ ವಿಧಿಶದ ಸಂಸದೆ ಮಾತ್ರ ಎಂದು ಹೇಳಿದ್ದಾರೆ. |