ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪ್ರತಿಕ್ರಿಯೆ ನೀಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಪ್ರತಿಪಕ್ಷದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬಹುಜನಸಮಾಜ ಪಕ್ಷದ ಸಂಸದರು ಮತ್ತು ಶಾಸಕರ ಸಭೆಯಲ್ಲಿ ಮಾತನಾಡುತ್ತಿದ್ದ ಮಾಯಾವತಿ ಮಹಾತ್ಮಾ ಗಾಂಧಿಯವರನ್ನು ನಾಟಕ್‌ಬಾಜ್(ನಕಲಿ) ಎಂದು ಕರೆದಿದ್ದರು.
ದಲಿತರ ಸಾಮಾಜಿಕ-ಆರ್ಥಿಕ ಸ್ಥಾನಮಾನ ಸುಧಾರಣೆಯಲ್ಲಿ ಅಪ್ರಮಾಣಿಕರಾಗಿದ್ದಾರೆಂದು ಮಹಾತ್ಮಾ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಖಂಡಿಸಿದ ಕರಪತ್ರಗಳನ್ನು ಕೂಡ ಅವರು ವಿತರಿಸಿದ್ದರು.
ರಾಷ್ಟ್ರಪಿತರನ್ನು ಅವಹೇಳನ ಮಾಡುವ ಪ್ರಯತ್ನವು ಪ್ರತ್ಯುತ್ಪಾದಕವಾಗಲಿದ್ದು ಅದಕ್ಕೆ ಬೆಲೆ ತೆರಬೇಕಾಗುತ್ತದೆಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುಬೋದ್ ಶ್ರೀವಾಸ್ತವ ತಿಳಿಸಿದರು.
ದಲಿತರ ಮೇಲೆ ಏಕಸ್ವಾಮ್ಯ ಸಾಧಿಸುವ ಅವರ ಪ್ರಯತ್ನ ವಿಫಲವಾಗಿದ್ದಕ್ಕೆ ಅವರ ಹತಾಶೆಯನ್ನು ಇದು ಪ್ರತಿಬಿಂಬಿಸುತ್ತದೆ. ದಲಿತರು ಅವರ ಖಾಸಗಿ ಆಸ್ತಿಯಲ್ಲವೆಂದೂ ಮಹಾತ್ಮ ಗಾಂಧಿ ದಲಿತರಿಗೆ ಮಾಡಿದ್ದೇನು ಮತ್ತು ಮಾಯಾವತಿ ಮಾಡುತ್ತಿರುವುದರ ನಡುವೆ ವ್ಯತ್ಯಾಸವನ್ನು ದಲಿತರು ಅರಿಯಬಲ್ಲರು ಎಂದು ಅವರು ನುಡಿದರು. |