ಕಲ್ಯಾಣ್ ಗಲಭೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನನ್ನು ವಜಾಗೊಳಿಸಿರುವ ಮುಂಬೈ ಹೈಕೋರ್ಟ್, ಜೂನ್ 29ರಂದು ರೈಲ್ವೇ ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶಿಸಿದೆ.
ರಾಜ್‌ಠಾಕ್ರೆಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶೆ ರೇಖಾ ಸೌಂದುರ್ಬಲದೊಟ ಅವರು ಈ ಹಂತದಲ್ಲಿ ಕಸ್ಟೋಡಿಯಲ್ ಇಂಟರಾಗೇಶನ್ ಅಗತ್ಯವಿಲ್ಲ ಎಂದು ಹೇಳಿದರು.
ಅವರನ್ನು ಅದಾಗಲೇ ರೈಲ್ವೇ ಪೊಲೀಸರು ಬಂಧಿಸಿರುವ ಕಾರಣ ಸೆಶನ್ಸ್ ನ್ಯಾಯಲಯದ ನಿರೀಕ್ಷಣಾ ಜಾಮೀನು ಅಸಿಂಧುವಾಗುತ್ತದೆ ಎಂಬ ಸರ್ಕಾರದ ವಾದವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ರೈಲ್ವೇ ನ್ಯಾಯಾಲಯದ ಮುಂದೆ ಶರಣಾಗಲು ಸೂಚಿಸಿದೆ.
ರಾಜ್ ಅವರನ್ನು ಅಕ್ಟೋಬರ್ 22ರಂದು ಬಂಧಿಸಲಾಗಿದ್ದು ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. |