ಸಿರಿವಂತ ಹುಡುಗಿಯೊಬ್ಬಾಕೆಯನ್ನು ರಹಸ್ಯವಾಗಿ ವಿವಾಹವಾದ 'ತಪ್ಪಿಗೆ' ಹುಡುಗನ ಮನೆಯ ಎಂಟು ಮಂದಿಯನ್ನು ಕತ್ತು ಕತ್ತರಿಸಿ, ಗುಂಡಿಕ್ಕಿ ಕೊಂದು ಬಿಹಾರದ ನದಿಯೊಂದಕ್ಕೆ ಎಸೆದ ಪಾಶವೀಯ ಕೃತ್ಯ ಸಂಭವಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ನದಿಯಲ್ಲಿ ತೇಲುತ್ತಿದ್ದ ಎಂಟು ಶವಗಳನ್ನು ಕಂಡ ಪೊಲೀಸರು 15 ಮಂದಿಯ ಮೇಲೆ ಕೊಲೆ ಆರೋಪ ಹೊರಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಹುಡುಗಿಯ ಕುಟುಂಬದವರಾಗಿದ್ದಾರೆ.
ರತನ್ ಮಂಡಲ್ ಎಂಬ 21ರ ಹರೆಯದ ಯುವಕ ಕಂಚನ್ ಕುಮಾರಿ ಎಂಬ 18ರ ಹರೆಯದ ಯುವತಿಯೊಂದಿಗೆ ಓಡಿಹೋಗಿ ರಹಸ್ಯವಾಗಿ ಮದುವೆಯಾಗಿದ್ದ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಭಯಭೀತರಾಗಿದ್ದ ಹುಡುಗನ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ.
"ಈ ವಿಚಾರವನ್ನು ಮಾತುಕತೆಯಲ್ಲಿ ಪರಿಹರಿಸೋಣ ಎಂದು ಹುಡುಗನ ಕುಟುಂಬಿಕರು ಉಪಾಯವಾಗಿ ಹುಡುಗಿಯ ಮನೆಯವರನ್ನು ಕರೆಸಿಕೊಂಡು ಮಾತುಕತೆಗೆ ತೆರಳಿದ್ದ ಎಲ್ಲ ಎಂಟು ಮಂದಿ ತಲೆ ಕತ್ತರಿಸಿ ಕೊಂದರು" ಎಂಬುದಾಗಿ ಭಾಗಲ್ಪುರದ ಹಿರಿಯ ಪೊಲೀಸ್ ಅಧಿಕಾರಿ ರಘುನಾಥ್ ಪ್ರಸಾದ್ ಸಿಂಗ್ ಹೇಳಿದ್ದಾರೆ. |