ಖಾಸಗೀ ಕಾಲೇಜುಗಳಲ್ಲಿ ನಿಯಮಗಳನ್ನು ಮೀರಿ ಅಧಿಕ ಮೊತ್ತದ ಶುಲ್ಕ ವಸೂಲಿ ಮಾಡುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಯನ್ನು ಪತ್ತೆಹಚ್ಚಲು ತಮಿಳ್ನಾಡು ಸರ್ಕಾರ ನೇಮಿಸಿರುವ ಪರಿವೀಕ್ಷಣಾ ಸಮಿತಿಯು ಹಲವು ಕಾಲೇಜುಗಳಿಗೆ ದಾಳಿ ನಡೆಸಿದೆ.
ಎ.ರಾಮಸ್ವಾಮಿ ನೇತೃತ್ವದ ಸಮಿತಿಯು ಕೆಲವು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾಲೇಜೊಂದರಲ್ಲಿ ಶುಲ್ಕ ವಸೂಲಿಯು ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಹೇಳಿದೆ.
ವಿಶ್ವವಿದ್ಯಾನಿಲಯಗಳಿಗೆ ಸುತ್ತೋಲೆಯೊಂದನ್ನು ಕಳುಹಿಸಿರುವುದಾಗಿ ತಿಳಿಸಿರುವ ಎ. ರಾಮಸ್ವಾಮಿ ಅವರು, ತಮ್ಮ ವ್ಯಾಪ್ತಿಗೆ ಬರುವ ಕಾಲೇಜುಗಳು ಏಕರೀತಿಯಲ್ಲಿ ಶುಲ್ಕ ವಸೂಲಿ ಮಾಡುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಶುಲ್ಕವಸೂಲಿ ನೀತಿಯನ್ನು ಉಲ್ಲಂಘಿಸಿರುವ ಕಾಲೇಜುಗಳಿಗೆ ಕಾರಣಕೇಳಿ ನೋಟೀಸು ಕಳುಹಿಸಿದ್ದು ತಕ್ಷಣ ಉತ್ತರಿಸಲು ತಿಳಿಸಲಾಗಿದೆ. ಸೂಕ್ತ ವಿವರಣೆ ಇಲ್ಲದೇ ಇದ್ದರೆ ಅಂತಹವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಅಂತಹ ವಿಶ್ವವಿದ್ಯಾನಿಲಯಗಳ ಮನ್ನಣೆಯನ್ನು ರದ್ದುಪಡಿಸುವುದಾಗಿ ಅವರು ತಿಳಿಸಿದ್ದಾರೆ.
ಸಮಿತಿಯು ಕಳೆದ ಕೆಲವು ದಿವಸಗಳಲ್ಲಿ ನಗರದ ಹಲವು ಕಾಲೇಜುಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿದೆ. |