ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಂದಿಜ್ವರ ನಿಯಂತ್ರಣದಲ್ಲಿದೆ: ಸಚಿವ ಅಜಾದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂದಿಜ್ವರ ನಿಯಂತ್ರಣದಲ್ಲಿದೆ: ಸಚಿವ ಅಜಾದ್
'ಪರಿಣಾಮಕಾರಿ' ಮತ್ತು 'ವಿಶೇಷವಾದ' ಕಾರ್ಯಗಳನ್ನು ಕೈಗೊಂಡಿರುವ ಕಾರಣ ರಾಷ್ಟ್ರದಲ್ಲಿ ಹಂದಿ ಜ್ವರವು ನಿಯಂತ್ರಣದಲ್ಲಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಹೇಳಿದ್ದಾರೆ. "ಸ್ವೈನ್ ಫ್ಲೂ ಸಂಪೂರ್ಣ ನಿಯಂತ್ರಣದಲ್ಲಿದೆ. ಮತ್ತು ರಾಷ್ಟ್ರದಲ್ಲಿ ಎಚ್1ಎನ್1 ವೈರಸ್ ಪ್ರಸ್ತುತಿಯು ನಗಣ್ಯವಾಗಿದೆ. ನಾವು ವಿಶೇಷವಾದ ಮುನ್ನೆಚ್ಚರಿಕಾ ಕ್ರಮ ವಹಿಸಿರುವ ಕಾರಣ ಅದು ಪಸರಿಸುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗಿದೆ" ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.

ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಆಗಮಿಸುವ ಪ್ರವೇಶ ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿರುವ ಕಾರಣ ವೈರಸ್ ಹರಡುವಿಕೆಯನ್ನು ತಡೆಯಲಾಗಿದೆ ಎಂದು ಸಚಿವರು ನುಡಿದರು.

ನಮಗಿಂತ ನಾಲ್ಕು ಪಟ್ಟು ಕಮ್ಮಿ ಜನಸಂಖ್ಯೆ ಇರುವ ಅಮೆರಿಕದಲ್ಲಿ ಸುಮಾರು 18 ಸಾವಿರ ಪ್ರಕರಣಗಳು ದಾಖಲಾಗಿವೆ. ಅಲ್ಲದೆ 45 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇದುವರೆಗೆ ಕೇವಲ 35 ಪ್ರಕರಣಗಳು ಮಾತ್ರ ದಾಖಲಾಗಿದ್ದು, ಇವರಲ್ಲಿ ಚಿಕಿತ್ಸೆಯ ಬಳಿಕ 12 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇವರಲ್ಲಿ 23 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದವರು ಹೇಳಿದರು.

ಅಮೆರಿಕದಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಈ ಸೋಂಕು ಕಾಣುತ್ತಿದ್ದು, ಹಂದಿಜ್ವರ ಪೀಡಿತ ರಾಷ್ಟ್ರಗಳಿಗೆ ಅನಗತ್ಯ ಭೇಟಿಗಳನ್ನು ನೀಡದಂತೆ ಜನತೆಗೆ ಸೂಚಿಸಲಾಗಿದೆ. ದೆಹಲಿ ಮತ್ತು ಪುಣೆಯ ಪ್ರಯೋಗಾಲಯಗಳಲ್ಲಿ ಮಾತ್ರ ಎಚ್1ಎನ್1 ವೈರಸ್ ಪತ್ತೆಗಾಗಿ ರಕ್ತಪರೀಕ್ಷೆ ನಡೆಸಲಾಗುತ್ತದೆ ಹಾಗೂ ರಾಷ್ಟ್ರಾದ್ಯಂತ ಇತರ 16 ಪ್ರಯೋಗಾಲಯಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲು ಆದೇಶಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

10 ದಶಲಕ್ಷ ಸ್ವೈನ್‌ಫ್ಲೂ ಔಷಧಿ ಕ್ಯಾಪ್ಸೂಲ್‌ಗಳನ್ನು ಸಂಗ್ರಹಿಸಲಾಗಿದ್ದು, ಇನ್ನೂ ಆರುದಶಲಕ್ಷಕ್ಯಾಪ್ಸೂಲ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ ಮತ್ತು ಕ್ಷಿಪ್ರ ಸ್ಪಂದನಕ್ಕಾಗಿ ವೈದ್ಯರ ತಂಡಗಳನ್ನು ರೂಪಿಸಲಾಗಿದೆ ಎಂದು ಅಜಾದ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
26/11: ಪೊಲೀಸರನ್ನು ರಕ್ಷಿಸುತ್ತಿರುವ ಸಿಎಂ
ಮುಂಬೈದಾಳಿ: ನ್ಯಾಯಾಲಯದಲ್ಲಿ ಸಿಸಿಟಿವಿ ದೃಶ್ಯಗಳು
ಅಸ್ಸಾಂನಲ್ಲಿ ಮಿಗ್-21 ಪತನ, ಪೈಲಟ್ ಸೇಫ್
ತ.ನಾ: ಖಾಸಗಿ ಕಾಲೇಜುಗಳ ಮೇಲೆ ದಾಳಿ
ಲಾಲ್‌ಗರ್: ಮಹಿಳೆ, ಮಕ್ಕಳು ನಕ್ಸಲರಿಗೆ ಗುರಾಣಿ!
ಚಿತ್ರಕೂಟ: ಮನೆಯಲ್ಲಿ ಅವಿತಿದ್ದ ಡಕಾಯಿತ ಪೊಲೀಸರ ಗುಂಡಿಗೆ ಬಲಿ