ಕೊಲೆ ಆರೋಪ ಎದುರಿಸುತ್ತಿರುವ ಎನ್‌ಸಿಪಿ ನಾಯಕ ಪದಂಸಿನ್ನಾ ಪಾಟೀಲ್ ಮನೆಗೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಶಸ್ತ್ರಾಸ್ತ್ರಗಳು, ದೊಡ್ಡ ಮೊತ್ತದ ನಗದು, ಹಾಗೂ ಹಲವಾರು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಮುಂಬೈಯ ಕೊಲಾಬದಲ್ಲಿರುವ ಶಾಂಗ್ರಿಲಾ ಕಟ್ಟಡದಲ್ಲಿರುವ ಪಾಟೀಲ್ ಅವರ ಫ್ಲಾಟ್‌ನಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ನಗದು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಮೂರು ಗನ್‌ಗಳು, ಒಂದು ರಿವಾಲ್ವರ್, ಏಳುಲಕ್ಷಕ್ಕೂ ಅಧಿಕ ಮೊತ್ತದ ನಗದು, ಅಪಾರಪ್ರಮಾಣದ ಮದ್ದುಗುಂಡುಗಳು, ಹೈ ಫ್ರೀಕ್ವೆನ್ಸಿ ವಾಕಿ-ಟಾಕಿ ಸೆಟ್‌ಗಳು, ಐದು ಕಂಪ್ಯೂಟರ್‌ಗಳು, ಸಿಡಿಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನ್ನ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್ ನಾಯಕ ಪವನ್ ರಾಜೆ ನಿಂಬಾಳ್ಕರ್ ಹಾಗೂ ಅವರ ಚಾಲಕ ಸಮದ್ ಕಾಜಿ ಅವರನ್ನು ನವಿಮುಂಬೈಯ ಕಲಂಬೊಲಿಯಲ್ಲಿ 2006ರ ಜುಲೈ 3ರಂದು ಕೊಲೆಗೈದಿರುವ ಆಪಾದನೆಯನ್ನು ಪದಂಸಿನ್ನಾ ಪಾಟೀಲ್ ಎದುರಿಸುತ್ತಿದ್ದಾರೆ. |