ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯುವರಾಜ ರಾಹುಲ್‌ಗಿಂದು ಹುಟ್ಟುಹಬ್ಬ ಸಂಭ್ರಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುವರಾಜ ರಾಹುಲ್‌ಗಿಂದು ಹುಟ್ಟುಹಬ್ಬ ಸಂಭ್ರಮ
PTI
ನೆಹರೂ ಕುಟುಂಬದ ಐದನೆ ತಲೆಮಾರಿನ ಕುಡಿ, ಕಾಂಗ್ರಾಸ್ಸಿಗರ ಕಣ್ಮಣಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಶುಕ್ರವಾರ ತನ್ನ 39ನೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆಡಂಬರದ ಆಚರಣೆ ಬೇಡ ಎಂದು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಿರುವ ಯುವರಾಜ, ತನ್ನ ಇಷ್ಟದ ಸ್ಥಳವಾಗಿರುವ ಲಂಡನ್‌‍ನಲ್ಲಿ ಆತ್ಮೀಯ ಮಿತ್ರರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಸೋನಿಯಾಗಾಂಧಿ ಅವರು ತನ್ನ ಪುತ್ರನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಸಹೋದರಿ ಪ್ರಿಯಾಂಕ ಹಾಗೂ ಆಕೆಯ ಪತಿ ರಾಬರ್ಟ್ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೋ ತಿಳಿದು ಬಂದಿಲ್ಲ. ಮಿತ್ರರು ಹಾಗೂ ಕೆಲವು ಕೌಟುಂಬಿಕ ಸ್ನೇಹಿತರೊಂದಿಗೆ ಖಾಸಗಿ ಭೋಜನಕೂಟ ಏರ್ಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರಾಹುಲ್ ತನ್ನ ಹುಟ್ಟುಹಬ್ಬವನ್ನು ಭಾರತದಲ್ಲಿ ಆಚರಿಸಿಕೊಂಡಿರುವ ಉದಾಹರಣೆಗಳು ಕಡಿಮೆ. ಲಂಡನ್ ‌ನಲ್ಲಿ ತನ್ನ ವಿದ್ಯಾಭ್ಯಾಸ ನಡೆಸಿರುವ ರಾಹುಲ್ ಗಾಂಧಿ ಅವರ ಅತ್ಯಂತ ಪ್ರೀತಿಯ ಸ್ಥಳ. ಕಳೆದ ವರ್ಷವೂ ಅವರು ಅಲ್ಲೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆನ್ನಲಾಗಿದೆ.

ಯಾವುದೇ ಆಡಂಬರದ ಆಚರಣೆ ನಡೆಸದಿರುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ 12, ತುಘಲಕ್ ಲೇನ್‌ನಿಂದ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ದಲಿತರ ಕಾಲೋನಿಗಳು ಮತ್ತು ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಹಣ್ಣಹಂಪಲು ಮತ್ತು ಸಿಹಿತಿಂಡಿಗಳನ್ನು ವಿತರಿಸಲು ಹೇಳಲಾಗಿದೆ. ಅಂತೆಯೇ ರಾಹುಲ್ ಗಾಂಧಿ ಹುಟ್ಟು ಹಬ್ಬವನ್ನು ರಾಷ್ಟ್ರಾದ್ಯಂತ 'ಸಂರಾಸ್ತ ದಿವಸ್' ಆಗಿ ಆಚರಿಸಲಾಗುತ್ತಿದೆ. ರಾಹುಲ್‌ರನ್ನು ದಲಿತಪರ ಮುಖಂಡನೆಂದು ಬಿಂಬಿಸುವ ಕಾರ್ಯಗಳನ್ನು ಪಕ್ಷವು ಮಾಡುತ್ತಿದೆ. ಇದರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ವಾಸನೆ ದಟ್ಟವಾಗಿದೆ.

ಎಲ್ಲಾ ಸರಿ ಮದ್ವೆ ಯಾವಾಗ?
39 ವರ್ಷ ವಯಸ್ಸಾದರೂ ರಾಹುಲ್ ಯಾವಾಗ ವಿವಾಹವಾಗುತ್ತಾರೆ ಎಂಬುದು ರಾಹುಲ್ ಪ್ರಿಯರ ಕುತೂಹಲ. ಪಕ್ಷಸಂಘಟನೆಯಲ್ಲಿ ತೊಡಗಿ ರಾಷ್ಟ್ರಾದ್ಯಂತ ಪ್ರಯಾಣಿಸಿ, ಯುವಕರನ್ನು ಸಂಘಟಿಸಲು ಹೆಣಗಾಡಿ, ಕಳೆದ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿರುವ ರಾಹುಲ್ ಮದುವೆಗೆ ಮನಸ್ಸು ಮಾಡುತ್ತಿಲ್ಲ. ಈ ಕುರಿತು ಅವರ ಸಹೋದರಿ ಪ್ರಿಯಾಂಕ ಅದೊಮ್ಮೆ ಪತ್ರಕರ್ತರೆದುರು ಹುಸಿಮುನಿಸು ತೋರಿದ್ದರು.

ರಾಹುಲ್ ಗಾಂಧಿಗೊಬ್ಬ ಗೆಳತಿ ಇದ್ದಾರೆ. ಆಕೆ ಸ್ಪೇನ್‌ ದೇಶದಾಕೆ ಎಂಬುದಾಗಿ ಅವರು ನಾಲ್ಕೈದು ವರ್ಷಗಳ ಹಿಂದೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದ್ದರು. "ನನ್ನ ಗೆಳತಿಯ ಹೆಸರು ವೆರೋನಿಕಾ, ಜೌನಿತಾ ಅಲ್ಲ. ಆಕೆ ಸ್ಪೇನಿಶ್, ವೆನಿಜುವ ಅಥವಾ ಕೊಲಂಬಿಯಾದವಳಲ್ಲ. ಆಕೆ ಆರ್ಕಿಟೆಕ್ಟ್, ವೇಟ್ರೆಸ್ ಅಲ್ಲ. ಒಂದೊಮ್ಮೆ ಆಕೆ ವೇಟ್ರೆಸ್ ಆಗಿರುತ್ತಿದ್ದರೂ ನನಗೇನು ಸಮಸ್ಯೆ ಇರುತ್ತಿರಲಿಲ್ಲ. ಅವಳು ನನ್ನ ಉತ್ತಮ ಸ್ನೇಹಿತೆ ಕೂಡ. ನಾನು ಆಕೆಯನ್ನು ಲಂಡನ್ ಯೂನಿವರ್ಸಿಟಿಯಲ್ಲಿ ಭೇಟಿಆಗಿದ್ದೆ" ಎಂದು ರಾಹುಲ್ ಈ ಹಿಂದೊಮ್ಮೆ ಹೇಳಿದ್ದರು. ಆದರೆ ನಾನು ಯಾವಾಗ ಸೆಟ್ಲ್ ಆಗುತ್ತೇನೋ ಗೊತ್ತಿಲ್ಲ ಎಂಬುದಾಗಿಯೂ ಅವರು ಹೇಳಿದ್ದರು.

ಜ್ಯೋತಿಷಿಗಳು ಏನು ಹೇಳುತ್ತಾರೆ?
1970ರ ಜೂನ್ 19ರಂದು ಜನಿಸಿರುವ ರಾಹುಲ್ ಅವರ ಜಾತಕ ಗ್ರಹಗತಿಗಳ ಪ್ರಕಾರ ಅವರೀಗ ನೀಚ ಭಂಗ ರಾಜಯೋಗ ಅನುಭವಿಸುತ್ತಿದ್ದಾರೆ. ಅಂದರೆ ಅವರು ಈ ನೆಲದ ಅತ್ಯುನ್ನತ ಸ್ಥಾನವನ್ನೇರುವ ಯೋಗ ಹೊಂದಿದ್ದಾರೆ. ಮುಂದಿನ ಒಂದು ವರ್ಷ ಅವರಿಗೆ ಅನುಕೂಲಕರವಾಗಿದೆ. ಆದರೆ ವಿವಾಹದ ಸಾಧ್ಯತೆ ಕಷ್ಟಸಾಧ್ಯವಂತೆ.

ಎಲ್ಲವೂ ಸರಿ. ದೇಶದ ಬಡವರ, ದಲಿತರ ಏಳಿಗೆಗಾಗಿ ಪಣತೊಟ್ಟಿರುವ ರಾಹುಲ್ ಗಾಂಧಿ ಹುಟ್ಟುಹಬ್ಬಾಚರಣೆಗೆ ವಿದೇಶವನ್ನು ಆಯ್ದುಕೊಂಡಿರುವುದ್ಯಾಕೆ ಎಂಬುದು ಬಡವರ ಪ್ರಶ್ನೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಬಿಐ ದಾಳಿ: ಪದಂಸಿನ್ನಾ ಮನೆಯಿಂದ ಶಸ್ತ್ರಾಸ್ತ್ರ ವಶ
ಶಿವಸೇನೆ ಮುಖ್ಯಸ್ಥ ಠಾಕ್ರೆ ಆಸ್ಪತ್ರೆಗೆ ದಾಖಲು
ಅವಹೇಳನಕಾರಿ ಹೇಳಿಕೆ: ಪಾಸ್ವಾನ್ ವಿರುದ್ಧ ಎಫ್‌ಐಆರ್
ನಕ್ಸಲರೊಂದಿಗೆ ಕ್ಷಮೆಯಾಚಿಸಲು ಸರ್ಕಾರ ನಕಾರ
ಹಂದಿಜ್ವರ ನಿಯಂತ್ರಣದಲ್ಲಿದೆ: ಸಚಿವ ಅಜಾದ್
26/11: ಪೊಲೀಸರನ್ನು ರಕ್ಷಿಸುತ್ತಿರುವ ಸಿಎಂ