ಗುಜರಾತ್ ಶಾಸನ ಸಭೆಯು ಅಂಗೀಕರಿಸಿರುವ ಭಯೋತ್ಪಾದನಾ ನಿಗ್ರಹದ ಕಠಿಣ ಕಾನೂನನ್ನು ಕೇಂದ್ರ ಸರಕಾರ ಮತ್ತೆ ಹಿಂದಿರುಗಿಸಲು ನಿರ್ಧರಿಸಿದೆ. ಮತ್ತು ಕೇಂದ್ರದ ಕಾನೂನಿಗೆ ಸಮವಾಗಿ ಕಾನೂನಿಗೆ ತಿದ್ದುಪಡಿ ಮಾಡುವಂತೆ ಅದು ಸೂಚಿಸಿದೆ.ಮೂರು ತಿದ್ದುಪಡಿಗಳನ್ನು ಮಾಡಲು ಸೂಚಿಸಿ ಸಂಘಟಿತ ಅಪರಾಧಗಳ ಗುಜರಾತ್ ನಿಯಂತ್ರಣ ಕಾಯ್ದೆಯನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲು ಸಂಪುಟವು ನಿರ್ಧರಿಸಿದೆ ಎಂದು ಗೃಹಸಚಿವ ಪಿ. ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸರ ವಿರುದ್ಧ ಮಾಡಿರುವ ತಪ್ಪೊಪ್ಪಿಗೆ ಸ್ವೀಕಾರಾರ್ಹ ಎಂಬುದನ್ನು ಕೈ ಬಿಡಬೇಕು ಎಂಬುದನ್ನು ಕಾಯ್ದೆಯಿಂದ ತೆಗೆದು ಹಾಕಬೇಕು ಎಂಬುದು ತಿದ್ದುಪಡಿಗೆ ಸಲಹೆ ನೀಡಿರುವುದರಲ್ಲಿ ಒಂದಾಗಿದೆ.ಗುಜರಾತ್ ಸರ್ಕಾರ ಅಂಗೀಕರಿಸಿರುವ ಮಸೂದೆಗೆ ಅದರ ಪ್ರಸಕ್ತ ರೂಪದಲ್ಲಿ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಹಾಗೂ ಬದಲಾವಣೆಗಳು ಅಗತ್ಯವಾಗಿದೆ ಎಂದು ಹೇಳಿದ್ದು, ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲಾಗಿರುವ ಭಯೋತ್ಪಾದನೆಯ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ ಸಮವಾಗಿಸಬೇಕು ಎಂದು ಗೃಹಸಚಿವರು ನುಡಿದರು. |